ಅರಂತೋಡು : ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ ಗಳ ಉದ್ಘಾಟನೆ

ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟನೆ ಕಾರ್ಯಕ್ರಮ ಫೆ.12ರಂದು ನಡೆಯಿತು.
ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರು
ಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಒಟ್ಟಾಗಿ ಕೆಲಸ ಮಾಡುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ.
ಗ್ರಾಮ ಪಂಚಾಯಿತಿಯಲ್ಲಿ ಕಲಿಕಾ ಕೇಂದ್ರ, ಗ್ರಂಥಾಲಯ ಮತ್ತು ಜಿಮ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದು ಗ್ರಾಮಸ್ಥರಿಗೆ ಜ್ಞಾನಾರ್ಜನೆ, ಮನರಂಜನೆ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮಹಿಳೆಯರು ಮತ್ತು ಯುವಕರಿಗೆ ವಿವಿಧ ಸಂಘಟನೆಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.. ಶಾಸಕರಾಗಿ ನಮ್ಮ ವಿಧಾನಸಭಾ ಕ್ಷೇತ್ರವಾದ ಕಡಬ ಮತ್ತು ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದೆನೆ‌. ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು ಮತ್ತು ನಾಗರಿಕರು ಒಟ್ಟಾಗಿ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮ ಮತ್ತು ತಾಲೂಕನ್ನು ನಿರ್ಮಿಸುವ ಗುರಿ ನನ್ನದು ಎಂದು ಸಭೆಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಇ.ಒ ರಾಜಣ್ಣ,ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್ ಗಂಗಾಧರ್,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಪಿ.ಡಿ.ಒ ಜಯಪ್ರಕಾಶ್ ಎಂ.ಆರ್ ಇತರ ಅಧಿಕಾರಿ ವರ್ಗ ವೇದಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರು,ಸದಸ್ಯರು ಗ್ರಾಮಸ್ಥರು ಕಾರ್ಯಕ್ರಮಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top