ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾದ ಸೆಕ್ಟರ್ 107 ರಲ್ಲಿ ಪ್ರೇಮಿಗಳಾದ ಸುಮಿತ್ ಮತ್ತು ರೇಖಾ ಅವರ ಶವ ಕಾರಿನಲ್ಲಿ ಪತ್ತೆಯಾಗಿದೆ. ಇಬ್ಬರಿಗೂ ತಲೆಗೆ ಗುಂಡೇಟು ತಗುಲಿತ್ತು. ಶುಕ್ರವಾರದಿಂದ ಕಾಣೆಯಾಗಿದ್ದ ಇವರ ಕುಟುಂಬಗಳು ದೂರು ಸಲ್ಲಿಸಿದ್ದವು. ಹುಡುಗನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಕಾರು ಒಳಗಿನಿಂದ ಲಾಕ್ ಆಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಿತ್ ಮೊದಲು ರೇಖಾ ಅವರಿಗೆ ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ.
ಪ್ರೇಮಿಗಳ ದಿನದಂದೇ ಪ್ರೇಯಸಿಯನ್ನು ಕೊಂದ ಪಾಪಿ



































