ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆ ಮೂರ್ನಾಡಿನಲ್ಲಿ ಶುಭಾರಂಭ

ಸುಳ್ಯ ಮೂಲದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆಯನ್ನು ಮೂರ್ನಾಡಿನಲ್ಲಿ ಪ್ರಾರಂಭಿಸಲಾಯಿತು. ಈ ಶಾಖೆಯ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.
ಸದ್ರಿ ಬ್ಯಾಂಕಿನ 24ನೇ ಶಾಖೆ ಇದಾಗಿದ್ದು, ಮೂರ್ನಾಡು ಭಾಗದಲ್ಲಿ ಇದು ಮತ್ತಷ್ಟು ಯಶಸ್ಸು ಕಾಣಲಿ ಎಂದು ಉದ್ಘಾಟನೆ ಬಳಿಕ ಮಾನ್ಯ ಶಾಸಕರು ಶುಭ ಕೋರಿದರು. ಮುಂದುವರೆದು ಮಾತನಾಡುತ್ತಾ, ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕೋಪರೇಟಿವ್ ಸೊಸೈಟಿ ಗಳು ತುಂಬಾ ಪ್ರಾಮುಖ್ಯತೆ ನೀಡುತ್ತಿವೆ. ಅದೇ ರೀತಿ ಈ ವರ್ಗದ ಜನರಿಗೆ ಕಾರ್ಪೊರೇಟಿವ್ ಸೊಸೈಟಿಯಿಂದ ಹೆಚ್ಚಿನ ಅನುಕೂಲ ಆಗುತ್ತಿದೆ. ಆದ್ದರಿಂದ ಇಂತಹ ಸೊಸೈಟಿಗಳು ಜನಸಾಮಾನ್ಯರ ಒಳಿತನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಮ್ಮ ಸಂಸ್ಥೆಯ ಬೆಳವಣಿಗೆಗು ಪೂರಕವಾದ ಅಂತಹ ನೀತಿಗಳನ್ನು ರೂಪಿಸಿ ಜನಮನ್ನಣೆ ಗಳಿಸುವಂಥದ್ದು ತುಂಬಾ ಮುಖ್ಯ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತವು ಬಹಳ ಶ್ರಮದಿಂದ ಜನಮನ ಗಳಿಸುತ್ತಿದ್ದು ಇದರ ಸದುಪಯೋಗ ಈ ಭಾಗದ ಜನರಿಗೆ ಒದಗುವಂತಾಗಲಿ ಎಂದು ತಮ್ಮ ಹಾರೈಕೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಾಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ ಸುಳ್ಯ ಇದರ ಅಧ್ಯಕ್ಷರು ಶ್ರೀ ಕೆ ಸಿ ಸದಾನಂದ ಮವಜಿ, ಉಪಾಧ್ಯಕ್ಷರು ದಿನೇಶ್ ಮಡಪ್ಪಾಡಿ, ಸದಸ್ಯರು, ಪದಾಧಿಕಾರಿಗಳು, ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷರು ಶ್ರೀ ಆನಂದ್ ಕರಂದ್ಲಾಜೆ, ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷರು ಅರುಣ್ ಅಪ್ಪಚ್ಚು, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಕೊಡಗು ಜಿಲ್ಲೆ ಚೇಂಬರ ಕಾಮರ್ಸ್ ಉಪಾಧ್ಯಕ್ಷರು ನವೀನ್ ಅಂಬೆಕಲ್ಲು, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರು ಪಣಾತ್ತಲೆ ಟಿ ಹರೀಶ್, ಕಾಂತೂರು-ಮೂರ್ನಾಡ್ ಪಂಚಾಯಿತಿಅಧ್ಯಕ್ಷರು ಕುಶನ್ ರೈ, ಪಕ್ಷದ ಮುಖಂಡರು ಡಿಸಿಸಿ ಸದಸ್ಯರು ಮುಕಟೀರ ಸಂದೀಪ್, ಆಪ್ರು ರವೀಂದ್ರ, ಹಾಗೂ ಸಿಬ್ಬಂದಿ ವರ್ಗದವರು.,ಪ್ರಮುಖರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top