ಕುಕ್ಕುಂಬಳ ಸೇತುವೆ ಮೇಲಿನಿಂದ ಹೊಳೆಗೆ ಸ್ಕೂಟಿಯೊಂದಿಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಸ್ಕೂಟಿ ಸವಾರೊಬ್ಬರು ಫೆ.14ರರಂದು ರಾತ್ರಿ ಸ್ಕೂಟಿಯೊಂದಿಗೆ ನಿಯಂತ್ರಣ ತಪ್ಪಿ ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆಯ ಮೇಲಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾದ ಘಟನೆ ವರದಿಯಾಗಿದೆ.
ಗಾಯಗೊಂಡ ವ್ಯಕ್ತಿ ಅಂಜಿಕ್ಕಾರ್ ಸುಂದರ ನಾಯ್ಕ ರವರ ಪುತ್ರ ರವಿಚಂದ್ರ ನಾಯ್ಕ ಎಂದು ತಿಳಿದು ಬಂದಿದೆ. ಅವರು ರಾತ್ರಿ ಸುಮಾರು 8 ಗಂಟೆಗೆ ಸುಳ್ಯದಿಂದ ಮನೆಕಡೆ ಹೋಗುತ್ತಿದ್ದ ವೇಳೆ ಈ ಅವಘದ ಸಂಭವಿಸಿದೆ. ಈ ಮೊದಲು ಇದೇ ಜಾಗದಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದಿತ್ತು. ಈ ಎಲ್ಲಾ ಘಟನೆಗೆ ಸೇತುವೆಗೆ ತಡೆ ಬೇಲಿ ಇಲ್ಲದೇ ಇರುವುದು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.ಮುಂದೆ ಅನಾಹುತ ನಡೆಯುದಕ್ಕಿಂತ ಮೊದಲು ಜನಪ್ರತಿನಿಧಿಗಳು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅನಾಹುತವನ್ನು ತಪ್ಪಿಸಬೇಕೆಂದು ಇಲ್ಲಿಯ ಜನರು ಅಗ್ರಹಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top