ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಶಿವರಾತ್ರಿ ಪ್ರಯಕ್ತ ಶಿವಪೂಜೆ ಭಜನಾ ಸತ್ಸಂಗ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 234ನೇ
ಕೃತಿಮಾಲೆ ಕಾಯಕದಿಂದಲೇ ಕೈಲಾಸ ಬಿಡುಗಡೆ ಸಮಾರಂಭ ನಡೆಯಿತು.
ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿದ್ದರು.
ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಕೃತಿ ಬಿಡುಗಡೆಗೊಳಿಸಿದರು.ಹಿರಿಯ ವೈದ್ಯರಾದ ಡಾ.ಸಾಯಿಗೀತಾ,ಮಂಗಳೂರು ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಅನಿಲ್ ಬಿ.ವಿ. ಹಿರಿಯರಾದ ಮುದ್ದಪ್ಪ ಗೌಡ ಕರ್ಲಪ್ಪಾಡಿ,ಅಡೂರು ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ವೇಣುಗೊಪಾಲ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಶಿಕ್ಷಕಿ ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ ವಂದಿಸಿದರು.ಶಿಕ್ಷಕಿ ಸುನಂದ ಕಾರ್ಯಕ್ರಮ ನಿರೂಪಿಸಿದರು.
ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ




















