ನಾಳೆ (ಫೆ.21) ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಅರಂತೋಡು-ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ
ತಾರೀಕು 21-02-2026ನೇ ಶನಿವಾರದಿಂದ ತಾರೀಕು 23-02-2026ನೇ ಸೋಮವಾರದ ತನಕ ವರ್ಷಂಪ್ರತಿ ನಡೆಯುವ
ಕಾಲಾವಧಿಯ ಹಾಗೂ ಹರಕೆಯ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.
ಆ ಪ್ರಯುಕ್ತ ನಡೆಯುವ ಶ್ರೀ ದೈವತಾಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿಯೂ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತನು-ಮನ-ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ದೈವಸ್ಥಾನದ ಆಡಳಿ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.
ದಿನಾಂಕ 21-02-2026ನೇ ಶನಿವಾರ ಅಪರಾಹ್ನ ಗಂಟೆ 3-00ಕ್ಕೆ ಗುಳಿಗನ ಕೋಲ ಮತ್ತು ಪ್ರಸಾದ ವಿತರಣೆ.ರಾತ್ರಿ ಗಂಟೆ 8-30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10-00ರಿಂದ ಮರುದಿನ ಸೂರ್ಯೋದಯದ ತನಕ ಸ್ವಾಮಿ ಕೊರಗಜ್ಜ ದೈವದ ಕಾಲಾವಧಿ ನೇಮೋತ್ಸವ ನಂತರ ಅಗೇಲು ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.ದಿನಾಂಕ 22-02-2026ನೇ ಆದಿತ್ಯವಾರ ರಾತ್ರಿ ಗಂಟೆ 8-00 ರಿಂದ ದಿನಾಂಕ 23-02-2026ನೇ ಸೋಮವಾರದವರೆಗೆ ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top