ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಭಾಗದ ಜನರು ಸೇತುವೆ ನಿರ್ಮಾಣ ಬೇಡಿಕೆ ಇಡೇರಿಲ್ಲ ಎಂದು ದೂರಿ ಸೇತುವೆ ನಿರ್ಮಾಣ ಆಗುವ ತನಕ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಬ್ಯಾನರ್ ಅಳವಡಿಸಿದ್ದಾರೆ.
ಸೇತುವೆ ನಿರ್ಮಾಣದ ಬೇಡಿಕೆ ಇಡೇರಿಲ್ಲ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿಗಳಾದ ನಾವು ಸುಮಾರು 20 ವರ್ಷಗಳಿಂದ ಸೇತುವೆ ಸಮಸ್ಯೆಯನ್ನು ಶಾಸಕರಿಗೆ ಹಾಗೂ ಸಚಿವರ ಬಳಿಗೆ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆಯದೆ ಇರುವ ಕಾರಣ ಸೇತುವೆ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ ಗಿಟ್ಟಿಸಿಕೊಂಡು ಹೋದ ರಾಜಕಾರಣಿಗಳಿಗೆ ಧಿಕ್ಕಾರ. ಈ ರೀತಿ ನಮ್ಮನ್ನು ಕಡೆಗಣಿಸಿದಕ್ಕಾಗಿ ಸೇತುವೆ ಆಗುವವರೆಗೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ನಾವು ಮತದಾನ ಬಹಿಷ್ಕರಿಸುತ್ತಿದ್ದೇವೆ. ಭರವಸೆ ನಿಲ್ಲಿಸಿ ವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯರು ಬ್ಯಾನರ್ ಹಾಕಿದ್ದಾರೆ.
ಹಾಡಿಕಲ್ಲು : ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಕೆ





















































