ಮಾ.13 ಅರಂತೋಡಿನಲ್ಲಿ ತೆಕ್ಕಿಲ್ ಸೌಹಾರ್ಧ ಇಪ್ತಾರ್ ಕೂಟ

ಅರಂತೋಡು: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 21 ನೇ ವರ್ಷದ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ಮಾರ್ಚ್ 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಗಮದಲ್ಲಿ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ನಯೀಮ್ ಫೈಝಿ ಅಲ್ ಮಹಬರಿ, ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಚೈತನ್ಯ ಸೇವಾಶ್ರಮ ಅಜ್ಜಾವರ, ಗುತ್ತಿಗಾರು ಚರ್ಚ್ ನ ಧರ್ಮ ಗುರುಗಳಾದ ರೆ| ಪ| ಆದರ್ಶ್ ಜೋಸೆಫ್ ಇವರು ಸಂದೇಶ ಭಾಷಣ ಮಾಡಲಿದ್ದಾರೆ. ಅಲ್ಲದೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top