ಅಡ್ತಲೆ -ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ವಾರ್ಷಿಕ ನಡಾವಳಿಯು ಸುಗ್ಗಿ 7 ರ ದಿನಾಂಕ 21.03.2026 ರಂದು ಸಂಜೆ ಅಡ್ತಲೆ ಮೂಲಸ್ಥಾನದಿಂದ ಭಂಡಾರ ಹೋಗಿ ಕೂಡಿ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸುಗ್ಗಿ 8 ರ ದಿನಾಂಕ 22.03.2026 ರಂದು ಬೆಳಿಗ್ಗೆ ಪ್ರಾತಃಕಾಲ ಶ್ರೀ ಉಳ್ಳಾಕುಲು ನೇಮ ನಡೆದು ಮಧ್ಯಾಹ್ನ ಪ್ರಧಾನಿ ಶ್ರೀ ಪುರುಷ ದೈವದ ನೇಮ ನಡೆಯಿತು.ನಂತರ ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ ದೀಟಿಗೆ ಪ್ರಧಾನಿ ಶ್ರೀ ರಾಜನ್ ದೈವದ ನೇಮ ನಡೆದು ರಾತ್ರಿ ಕೂಜಿ ದೈವಗಳ ನೇಮದೊಂದಿಗೆ ವಾರ್ಷಿಕ ನಡಾವಳಿಯು ಸಮಾಪ್ತಿಯಾಯಿತು. ಅಡ್ತಲೆ – ಬೆದ್ರುಪಣೆ ಹತ್ತೊಕ್ಕಲಿನವರು,ಭಂಡಾರ ಮನೆಯವರು, ದೈವದ ಪೂಜಾರಿಗಳು, ಆಡಳಿತ ಸಮಿತಿಯವರು ಹಾಗೂ ಊರ ಪರವೂರ ಭಕ್ತಾದಿಗಳು ದೈವಗಳ ಪ್ರಸಾದ ಸ್ವೀಕರಿಸಿದರು.
ಅಡ್ತಲೆ -ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ವಾರ್ಷಿಕ ನಡಾವಳಿ














































