ಸತ್ಯ ಜ್ಯಾನವು ಉತ್ತಮ ನಾಳೆಗಾಗಿ ಎಂಬ ವೇದ ವಾಕ್ಯದೊಂದಿಗೆ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವು ಮಾ 29ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ದಲ್ಲಿ ನಡೆಯಿತು, ಖತಿಬರಾದ ಬಹು, ಆಸೀಫ್ ಅಝ್ ಹರಿ ದುವಾ ನೆರವೇರಿಸಿ ಮಾತನಾಡಿ ದೇಶ ವಿದೇಶ ದಲ್ಲಿ ಸಮಸ್ತದ ಮದ್ರಸ ಗಳು ಇಂದು ಪ್ರಾರಂಭಗೊಳ್ಳಲಿದೆ, ಮದ್ರಸ ದಲ್ಲಿ ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಅದಬನ್ನು (ಶಿಸ್ತು )ಕಲಿಸಲಾಗುತ್ತದೆ ಮತ್ತು ಆದುನಿಕ ಶಿಕ್ಷಣಕ್ಕೆ ತಕ್ಕಂತೆ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು, ಅಧ್ಯಕ್ಷತೆ ಯನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿ ಮಾತನಾಡಿ ಸಮಸ್ತದ ನಿರ್ದೇಶನ ಪ್ರಕಾರ ಮುಂದಿನ ದಿನದಲ್ಲಿ ಮದರಸ ವನ್ನು ಆದುನಿಕ ಶಿಕ್ಷಣ ಕ್ಕೆ ತಕ್ಕಂತೆ ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಮಾಡಲಾಗುದು ಈಗಾಗಲೇ ಪೆನಲ್ ಬೋರ್ಡ್ ಮತ್ತು ಇತರ ಸೌಲಭ್ಯಗಳಿಗೆ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ ಸಹೋದರರು, ಸಂಸುದ್ದಿನ್ ಪೆಲತಡ್ಕ ಸಹೋದರರು, ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ನೀಡುವುದಾಗಿ ತಿಳಿಸಿದರು
ಸದರ್ ರವೂಫ್ ಅಝ್ ಹರಿ ಮುಸ್ಲಿಯಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು, ನಿವೃತ್ತ ಉಪಾನ್ಯಾಸ ಎ ಅಬ್ದುಲ್ಲ ಮಾಸ್ಟರ್, ಎ ಹೆಚ್ ವೈ ಎ ಕಾರ್ಯದರ್ಶಿ ಪಸಿಲು, ಪಟೇಲ್ ಟ್ರಸ್ಟ್ ಗೌರವ ಅಧ್ಯಕ್ಷ ಹಾಜಿ ಬದುರುದ್ದಿನ್ ಪಟೇಲ್, ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟೆಂಗಾರ್ ಶುಭ ಹಾರೈಸಿದರು
ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಜಮಾ ಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮೊಹಮ್ಮದ್, ಕಾರ್ಯದರ್ಶಿ ಕೆ ಎಂ ಮೂಸಾನ್, ಮದರಸ ಉಸ್ತಾವರಿ ಸಂಚಾಲಕ ಅಮೀರ್ ಕುಕ್ಕುಂಬಳ, ನಿರ್ದೇಶಕರಾದ ಸಂಸುದ್ದಿನ್ ಪೆಲತಡಕ್ಕ, ಮುಜೀಬ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಮೊಯಿದು ಕುಕ್ಕುಂಬಳ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಸುದ್ದಿನ್ ಕ್ಯೂರ್, ದುಬೈ ಸಮಿತಿ ಸದಸ್ಯ ರಹೀಮ್ ಉದಯನಗರ, ಸೌದಿ ಸಮಿತಿ ಸದಸ್ಯ ಇಸಾಕುದ್ದಿನ್, ನವಾಜ್ ಉದಯನಗರ, ಮೊಯಿದುಕುಟ್ಟಿ, ಬಾತೀಶ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು, ಕೆ ಎಂ ಮೂಸಾನ್ ಸ್ವಾಗತಿಸಿ ಅಮೀರ್ ಕುಕ್ಕುಂಬಳ ವಂದಿಸಿದರು
ಅರಂತೋಡು :ಸತ್ಯ ಜ್ಯಾನವು ಉತ್ತಮ ನಾಳೆ ಗಾಗಿ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವ














































