ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಅಜಿಂಕ್ಯ ರಹಾನೆ (67) ಮತ್ತು ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ (78 ರನ್, 38 ಎಸೆತ) ಮತ್ತು ರಯಾನ್ ರಿಕೆಲ್ಟನ್ (81 ರನ್, 43 ಎಸೆತ) ಮೊದಲ ವಿಕೆಟ್‌ಗೆ 148 ರನ್‌ಗಳ ಸ್ಫೋಟಕ ಜೊತೆಯಾಟ ನೀಡಿದ್ದರು. 19.1 ಓವರ್‌ಗಳಲ್ಲಿ ಮುಂಬೈ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಐಪಿಎಲ್ : ಕೆ.ಕೆ.ಆರ್ ವಿರುದ್ಧ ಗೆದ್ದು ಬೀಗಿದ ಮುಂಬೈ!














































