ಗೂನಡ್ಕ: ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿಯನ್ನು ಕಳವು ಮಾಡಿರುವ ಘಟನೆ ಮಾ.30 ರಂದು ಗೂನಡ್ಕ ದಿಂದ ವರದಿಯಾಗಿದೆ .ಮದ್ಯಾಹ್ನ ಹೊತ್ತಿಗೆ ವ್ಯಕ್ತಿ ಯೊಬ್ಬರು ಮಸೀದಿ ಒಳಗೆ ನುಗ್ಗಿ ಕಾಣಿಕೆ ಹುಂಡಿ ಹೊಡೆದು ಹಣವನ್ನು ದೋಚಿದಾನೆ.ಸಿಸಿಟಿವಿ ದೃಶ್ಯ ದಲ್ಲಿ ವ್ಯಕ್ತಿಯ ಚಹರೆ ಗುರುತು ಪತ್ತೆಯಾಗಿದೆ. ನಡೆದಿದ್ದು, ಕಳ್ಳತನದ ಪಕ್ಕಾ ಮಾಹಿತಿ ಲಭ್ಯವಾಗಿದೆ.ಸೋಮವಾರ ಮಧ್ಯಾಹ್ನ ಸರಿಯಾಗಿ 12:10 ಗಂಟೆಗೆ ವ್ಯಕ್ತಿಯೊಬ್ಬ ಮಸೀದಿಯ ಆವರಣ ಪ್ರವೇಶಿಸಿ ಹರಕೆ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಸಂಪೂರ್ಣ ಕೃತ್ಯವು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆರೋಪಿ ನೀಲಿ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ.
ಗೂನಡ್ಕ ಹಾಡುಹಗಲೇ ಕಳ್ಳತನ ಮಸೀದಿಯ ಕಾಣಿಕೆ ಹುಂಡಿ ಕಳವು














































