ಸುಳ್ಯ ನಗರದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸುಳ್ಯ ಇದು 2023ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025-26 ನೇ ಸಾಲಿನ ಆರ್ಥಿಕ ವರ್ಷವೂ ಸಹಕಾರಿಗೆ ಪೂರ್ಣವಾಗಿ ವ್ಯವಹರಿಸಲು ದೊರಕಿದ ಎರಡನೇ ಆರ್ಥಿಕ ವರ್ಷವಾಗಿದ್ದು ಈ ಅವಧಿಯಲ್ಲಿ ಸದಸ್ಯರ ಸಹಕಾರದೊಂದಿಗೆ ರೂ. 43.81 ಕೋಟಿ ವ್ಯವಹಾರ ನಡೆಸಿ ರೂ. 13.57 ಲಕ್ಷ ಲಾಭಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.2026 ಮಾರ್ಚ್ 31ಕ್ಕೆ ಸಂಘದಲ್ಲಿ ಒಟ್ಟು 1325 ಜನ ಸದಸ್ಯರಿದ್ದು ರೂ. 9.29 ಲಕ್ಷ ಪಾಲುಬಂಡವಾಳ ಹೊಂದಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇಕಡ 89 ರಷ್ಟು ಹೆಚ್ಚಳವಾಗಿದೆ. ಸಂಘವು ರೂ. 4.30 ಕೋಟಿ ಠೇವಣಿಯನ್ನು ಹೊಂದಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 49ರಷ್ಟು ಪ್ರಗತಿ ಸಾಧಿಸಲಾಗಿದೆ. ರೂ. 4.04 ಕೋಟಿ ಹೊರಬಾಕಿ ಸಾಲ ಇದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಹೆಚ್ಚಳವಾಗಿದೆ ಅಲ್ಲದೆ ಸಾಲ ಮರುಪಾವತಿಯಲ್ಲಿ ಶೇ. 98.67 ರಷ್ಟು ಉತ್ತಮ ಪ್ರಗತಿ ದಾಖಲಿಸಿರುತ್ತೇವೆ. ಸಂಘವು ರೂ. 4.41 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಲಾಭ ಗಳಿಕೆಯಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಶೇ. 48 ರಷ್ಟು ಪ್ರಗತಿ ದಾಖಲಾಗಿರುತ್ತದೆ. ಸಂಘದಲ್ಲಿ ಪ್ರಸ್ತುತ ಮೂರು ಜನ ಸ್ವರ್ಣದಿನ (ಪಿಗ್ಮಿ) ಠೇವಣಿ ಸಂಗ್ರಾಹಕರಿದ್ದಾರೆ.ಸಹಕಾರಿಯು ಮೂರನೇ ಆರ್ಥಿಕ ವರ್ಷದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ 2025-26 ನೇ ಸಾಲಿನ ಆರ್ಥಿಕ ವ್ಯವಹಾರವನ್ನು ಯಶಸ್ವಿಯಾಗಿ ಮುಗಿಸಿ 2026- 27ನೇ ಸಾಲಿಗೆ ಮುಂದಡಿ ಇಡುತ್ತಿರುವ ಈ ಸಂದರ್ಭದಲ್ಲಿ ಸಹಕಾರಿಯ ಸಾಧನೆಗೆ ಸಹಕರಿಸುತ್ತಿರುವ, ಬೆಂಬಲಿಸುತ್ತಿರುವ, ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈ ಸಂದರ್ಭದಲ್ಲಿ ತಿಳಿಸಿರುತ್ತಾರೆ.
ಸುಳ್ಯ ಸ್ವರ್ಣಶ್ರೀ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ರೂ. 43.81 ಕೋಟಿ ವ್ಯವಹಾರ ರೂ. 13.57 ಲಕ್ಷ ಲಾಭ.














































