ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ , ಕೇಂದ್ರ ಕಛೇರಿ ವಿಟ್ಲ ಇದರ ವತಿಯಿಂದ ಅಜ್ಜಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 120 ಜನ ಫಲಾನುಭವಿಗಳಿಗೆ ಏಣಿ ವಿತರಣೆ ಕಾರ್ಯಕ್ರಮ ನಡೆಯಿತು. ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಮೇನಾಲದಲ್ಲಿ ನಡೆದ ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ಸುಳ್ಯ ಸಿ. ಎ ಬ್ಯಾಂಕ್ ಮಾಜಿ ಅಧ್ಯಕ್ಷರು,ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಕಾರ್ಯದರ್ಶಿ ಶ್ರೀ ಸುಭೋದ್ ಶೆಟ್ಟಿ,ಮೇನಾಲ ವಹಿಸಿದ್ದರು. ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಪ್ರಸಾದ್ ರೈ,ಮೇನಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಿ.ಎ ಬ್ಯಾಂಕ್ ಸುಳ್ಯ ಇದರ ಅಧ್ಯಕ್ಷರಾದ ಶ್ರೀ ವಿಕ್ರಂ, ಅಡ್ಪ್ಪoಗಾಯ ಅವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಲಭ್ಯವಿರುವ ತಾಳೆ ಕೃಷಿ ಹಾಗೂ ರೇಷ್ಮೆ ಕೃಷಿ, ಮಲ್ಲಿಗೆ ಕೃಷಿ ಕುರಿತು ಶ್ರೀಮತಿ ಮೋಹಿನಿ ವಿಶ್ವನಾಥ(ನಿಶಾ), ಸಂಪಾಜೆ ಮಾಹಿತಿಯನ್ನು ನೀಡಿದರು.ಬಿ ಆರ್ ಪಿ ಜಯಲಕ್ಷ್ಮಿ, ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಕೃಷಿಸಖಿ ಶ್ರೀಮತಿ ಪೂರ್ಣಿಮಾ, ಮುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೃಷಿಕರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಬರುವ ಕೃಷಿ ಬೆಳೆಯನ್ನು ಮಾಡುವ ತಂತ್ರಜ್ಞಾನ ಮತ್ತು ಸಹಾಯ ಮಾಡುವ ಉದ್ದೇಶ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಮೂಲ ಉದ್ದೇಶ ಆಗಿರುತ್ತದೆ. ಈ ಸಂದರ್ಭದಲ್ಲಿ ಪಶುಸಖಿ ಶ್ರೀಮತಿ ಪುಷ್ಪಾವತಿ ದೊಡ್ಡೇರಿ,ಪ್ರಧಾನ ಪುಸ್ತಕ ಬರಹಗಾರರು ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ, ಎಲ್.ಸಿ ಆರ್ ಪಿ ಗಳಾದ ಶ್ರೀಮತಿ ಹರಿಣಾಕ್ಷಿ. ಕೆ , ಶ್ರೀಮತಿ ವಾಣಿ ದೊಡ್ಡೇರಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಅಭಿಮಾನ್ ಪ್ರಾರ್ಥಿಸಿ, ಪೂರ್ಣಿಮಾ ಮುಳ್ಯ ಸ್ವಾಗತಿಸಿದರು.ಶ್ರೀಮತಿ ಗೀತಾ ವಂದಿಸಿದರು. ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ ಮಧ್ಯಾಹ್ನದ ಲಘು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಅಜ್ಜಾವರ : ಕೃಷಿಕರಿಗೆ ಏಣಿ ವಿತರಣೆ.- ಸೌಲಭ್ಯ ಪಡೆದ 120 ಜನ ಫಲಾನುಭವಿಗಳು














































