ಏ.5ಕ್ಕೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಬೃಹತ್ ಕರಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಮತ್ತು ಶುದ್ಧಿಕರಣದ ಸಲುವಾಗಿ
ಏ.5ರಂದು ಬೃಹತ್ ಕರಸೇವೆ ನಡೆಯಲಿದೆ.ಈ ಕರಸೇವೆಯಲ್ಲಿ ಸೀಮೆಯ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಿ ಕರಸೇವೆಯನ್ನು ಯಶಸ್ವಿಗೊಳಿಸಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.





















































































Leave a Comment

Your email address will not be published. Required fields are marked *

error: Content is protected !!
Scroll to Top