ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಕರಸೇವೆಯಲ್ಲಿ ಸುಮಾರು 500ಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು, ಜಾತ್ರೋತ್ಸವ ಸಮಿತಿಯವರು ಜೀರ್ಣೊದ್ದಾರ ಸಮಿತಿಯವರು ಸೀಮೆಯ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಿ ಕರಸೇವೆಯನ್ನು ಯಶಸ್ವಿಗೊಳಿಸಿದರು. ಕರಸೇವೆಯಲ್ಲಿ ಭಾಗವಹಿಸಿದವರಿಗೆ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಕೃತಜ್ಞತೆ ಸಲ್ಲಿಸಿದರು.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ 18 ಗ್ರಾಮಸ್ಥರಿಂದ ಬೃಹತ್ ಕರಸೇವೆ














































