ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ದೇವಿ ಭಗವತಿ ಮಂದಿರದ 28ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಏ.19ರಂದು ನಡೆಯಿತು
ಬೆಳಗ್ಗೆ ಗಂಟೆ 9.00ಕ್ಕೆ ಗಣಪತಿ ಪೂಜೆ ಬೆಳಗ್ಗೆ ಗಂಟೆ 10.00ಕ್ಕೆ : ಶ್ರೀ ಸತ್ಯನಾರಾಯಣ ಪೂಜೆ
ಬೆಳಗ್ಗೆ ಗಂಟೆ 11.00ಕ್ಕೆ : ಭಜನಾ ಸತ್ಸಂಗ ನಡೆಯಿತು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿದ ಸದಸ್ಯರಾದ ತೇಜ ಕುಮಾರ್ ಬಡ್ಡಡ್ಕ ಅಧ್ಯಕ್ಷತೆ ವಹಿಸಿದ್ದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 235ನೇ ಕೃತಿ ಮನಸ್ಸಿನಲ್ಲಿದ್ದಾನೆ ಮಹಾದೇವನ್ನು ಮಾಜಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಕೆ ಹಿಮಕರ ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ಮೂಲ ಸಂಸ್ಕೃತಿಗಳ‌್ನು ಉಳಿಸಿಕೊಂಡು ಸಾಮಾಜಿಕ ಕಳಕಳಿ ರೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ.ತಾನು ಕಲಿತ ವಿದ್ಯೆಗಳನ್ನು ಇತರರಿಗೆ ಕಲಿಸಿ ಕೊಡುವುದು ಶ್ರೇಷ್ಠ ಕೆಲಸ.ಯಾವುದೇ ಸಾರ್ಥವಿಲ್ಲದೆ ಸ್ವಾಮೀಜಿಯವರು ಈ ಕೆಲಸ ಮಾಡುವುದನ್ನು ಭಗವಂತ ಮೆಚ್ಚುತ್ತಾನೆ.ಇಂತಹ ಇನ್ನಷ್ಟು ಕೆಲಸಗಳು ಸ್ವಾಮೀಜಿಯವರಿಂದ ಇನ್ನಷ್ಟು ಕಾಲ ನಡೆಯಲಿ ಎಂದು ಹೇಳಿದರು.
ಸ್ವಾಮಿ ಯೋಗೇಶ್ವರಾನಂದ ಸ್ವಾಮೀಜಿ ವೇದಿಕೆಯಲ್ಲಿದ್ದರು.
ನ್ಯಾಯವಾದಿ ವಿದ್ಯಾದರ ಬಡ್ಡಡ್ಕ,ಕರ್ಲಪ್ಪಾಡಿ ಶಾಸ್ತಾವು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ,ಹಿರಿಯರಾದ ಶಿರಾಜೆ ಮುದ್ದಪ್ಪ ಗೌಡ ಮುಖ್ಯ ಅಥಿಗಳಾಗಿ ಭಾಗವಹಿಸಿದರು.
ಶಿಕ್ಷಕಿ ಸುನಂದ ಸ್ವಾಗತಿಸಿ,ಆಶ್ರಮದ ಟ್ರಸ್ಟಿ ಪ್ರಣವಿ ವಂದಿಸಿದರು.ಪ್ರೋ.ಅನಿಲ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಹಭೋಜನ ನಡೆಯಿತು.
ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ದೇವಿ ಭಗವತಿ ಮಂದಿರದ 28ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ














































