ಕಾಸರಗೋಡುದಲ್ಲಿ ನೆನ್ನೆ ದುರ್ಘಟನೆಯೊಂದು ನಡೆದಿದೆ.ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿಯ ಸಮೀಪ ನಡೆದುಹೋಗುತ್ತಿದ್ದ ವೇಳೆ ಮಂಗಳೂರಿನಿಂದ ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಬಲವಾದ ಗಾಳಿಗೆ ಸಿಲುಕಿ 5 ವರ್ಷದ ಮರಿಯಂ ನವಾಲ್ ತಾಹೀರ್ ಹಾಗೂ ಅಜ್ಜಿ ನಫೀಸ ಬಿದ್ದು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿ ನಫೀಸ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈಲಿನ ಗಾಳಿಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ!














































