ಅರಂತೋಡು ಎಸ್.ಕೆ.ಎಸ್.ಬಿ.ವಿ ಯ ನೂತನ ಸಮಿತಿ ರಚನೆಅಧ್ಯಕ್ಷರಾಗಿ ಫರಾಝ್ ಮೊಟ್ಟೆಂಗಾರ್, ಪ್ರ. ಕಾರ್ಯದರ್ಶಿಯಾಗಿ ಹಫೀಝ್ ಆಯ್ಕೆ

ಸಮಸ್ತ ಕೇರಳ ಸುನ್ನಿ ಬಾಲವೇದಿ ಅರಂತೋಡು ಶಾಖಾ ಮಟ್ಟದ ವಾರ್ಷಿಕ ಮಹಾ ಸಭೆಯು ಎ.28 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಖತೀಬರಾದ ಬಹು| ಆಸಿಫ್ ಅಝ್ಹರಿ ದುವಾ ನೆರವೇರಿಸಿದರು.
ಸದರ್ ರಪೂಫ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಶುಭ ಹಾರೈಸಿದರು. ಕಾರ್ಯದರ್ಶಿ ಹಫೀಝ್ ಸ್ವಾಗತಿಸಿ ನವಾಝ್ ಲೆಕ್ಕ ಪತ್ರಗಳನ್ನು ಮಂಡಿಸಿದರು.
ಸಭೆಯಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಫರಾಝ್ ಮೊಟ್ಟೆಂಗಾರ್, ಪ್ರ.ಕಾರ್ಯದರ್ಶಿಯಾಗಿ ಹಫೀಝ್ ಕೊಡಂಕೇರಿ, ಕೋಶಾಧಿಕಾರಿಯಾಗಿ ರುಫೈಝ್, ಉಪಾಧ್ಯಕ್ಷರುಗಳಾಗಿ ಶಾಕಿರ್ ಕ್ಯೂರ್, ನಿಹಾಲ್, ಸಂಘಟನಾ ಕಾರ್ಯದರ್ಶಿಯಾಗಿ ನವಾಝ್ ಉದಯನಗರ, ಜತೆ ಕಾರ್ಯದರ್ಶಿಗಳಾಗಿ ಸನೂಫ್, ಶಬೀರ್, ಶಮ್ಮಾಸ್ ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಝಹ್ ರಿ ಕಾರ್ಯಕ್ರಮ ನಿರೂಪಿಸಿದರು.































































































Leave a Comment

Your email address will not be published. Required fields are marked *

error: Content is protected !!
Scroll to Top