ಲೋಕೋಪಯೋಗಿ ಇಲಾಖೆ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ
ಅರಂತೋಡು-ಎಲಿಮಲೆ ರಸ್ತೆಯ ಎರಡು ಬದಿ ಕಾಡು ಕಡಿಯಬೇಕೆಂದು ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.
ನಮ್ಮೂರಿನ ಮಧ್ಯದಲ್ಲಿ ಹಾದು ಹೋಗುವ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಹುಲ್ಲು, ಕಾಡುಗಳು ತುಂಬಿ ಪೊದೆಗಳಂತಾಗಿದ್ದು ರಸ್ತೆಯಲ್ಲಿ ಸಂಚಾರಕ್ಕೆ ತೊಡಕು ಉಂಟಾಗಿದೆ. ರಸ್ತೆಯ ತಿರುವುಗಳಲ್ಲಿ ಎದುರುಗಡೆಯಿಂದ ವಾಹನಗಳು ಬರುವುದು ಕಾಣದೆ ಕೆಲವು ದಿನಗಳ ಹಿಂದೆ ಅಪಘಾತಗಳು ಸಂಭವಿಸಿದೆ. ಅಲ್ಲದೇ ಆನೆ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳು ಸಂಚರಿಸುವ ಪ್ರದೇಶವಾಗಿದ್ದು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು,ಸರಕಾರಿ ಬಸ್ ಹಾಗೂ ಶಾಲಾ ವಾಹನಗಳು ದಿನಂಪ್ರತಿ ಸಂಚರಿಸುವ ಈ ರಸ್ತೆಯ ಬದಿಗಳಲ್ಲಿ ಆವರಿಸಿರುವ ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಅರಂತೋಡು-ಎಲಿಮಲೆ ರಸ್ತೆಯ ಎರಡು ಬದಿ ಕಾಡು ಕಡಿಯಲು ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಮನವಿ





































































