ಅಜ್ಜಾವರ ಮಹಿಷಮರ್ದಿನಿ ದೇವಳಕ್ಕೆ ಪಾದಾರ್ಪಣೆ ಮಾಡಿದ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ವಿಧುಶೇಖರಭಾರತೀ ಶ್ರೀಗಳು

ಅಜ್ಜಾವರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀ ಮಾತಾ ಸಭಾಭವನದ ಉದ್ಘಾಟನೆಗೊಳ್ಳಲಿದ್ದು ಇಂದು(ಮೇ 13ರಂದು) ಶೃಂಗೇರಿ ಮಠದ ವಿಧುಶೇಖರಭಾರತೀ ಶ್ರೀಗಳು ಅಜ್ಜಾವರ ಮಹಿಷಮರ್ದಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.ಅವರನ್ನು ದೇವಸ್ಥಾನದ ವತಿಯಿಂದ ಭವ್ಯ ಸ್ವಾಗತ ಕೋರಿ ಬರಮಾಡಿ ಕೊಳ್ಳಲಾಯಿತು.
ಗ್ರಾಮ ಪಂಚಾಯತ್‌ ಕಚೇರಿಯ ಬಳಿಯಲ್ಲಿ ಸ್ವಾಮೀಜಿಯವರಿಗೆ ಸ್ವಾಗತ ಕೋರಲಾಯಿತು.
ಪೂರ್ಣಕುಂಭದೊಂದಿಗೆ ವಾದ್ಯಾ ಬ್ಯಾಂಡ್ ಸೆಟ್ ನೊಂದಿಗೆ ಅದ್ದೂರಿ ಸ್ವಾಗತ ನೀಡಿಲಾಯಿತು.
ಬಳಿಕ ಧೂಳೀ ಪಾದಪೂಜೆ, ರಾತ್ರಿ ದೇವರನಾಮಗಳು, ರಾತ್ರಿ ಶ್ರೀ ಮಜ್ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, ಅನ್ನಸಂತರ್ಪಣೆ ನಡೆಯಿತು. ಮೇ 14ರಂದು
ಬೆಳಿಗ್ಗೆ 7 ಗಂಟೆಗೆ ಸಭಾಭವನದಲ್ಲಿ‌ ಗಣಪತಿ ಹೋಮ‌ ನಡೆಯಲಿದೆ.9.30ರಿಂದ ಶ್ರೀ ಜಗದ್ಗುರುಗಳಿಂದ ಪ್ರಸನ್ನ ಪೂಜೆ,
ಬೆಳಿಗ್ಗೆ 10:30 : ದೀಪಪ್ರಜ್ವಲನೆ, ಶ್ರೀ ಮಾತಾ ಸಭಾವನ ಉದ್ಘಾಟನೆ, 11:00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು‌ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ಘನ ಸರ್ಕಾರದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ,
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲಾಣ ಸಚಿವರಾದ ದಿನೇಶ್ ಗುಂಡೂರಾವ್,ಸಂಸದ ಕ್ಯಾಪ್ಟನ್ ಬ್ರೀಜೇಶ್ ಚೌಟ,ಸ
ಶಾಸಕಿ ಭಾಗೀರಥಿ ಮುರುಳ್ಯ,ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿರುವವರು.



































































































Leave a Comment

Your email address will not be published. Required fields are marked *

error: Content is protected !!
Scroll to Top