ಪಂಜ : ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ವಿವಿಧ ವೈದಿಕ ಕಾರ್ಯಕ್ರಮಗಳು

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಕಳೆದ ತಿಂಗಳು ನಡೆದ ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ದಿನಾಂಕ 15-5-26 ಶುಕ್ರವಾರ ಬೆಳಗ್ಗೆ 8.30ಕ್ಕೆ ದೇಗುಲದ ಎದುರು ಇರುವ ಚಾವಡಿಯಿಂದ ಶ್ರೀ ಉಳ್ಳಾಕ್ಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳ ಭoಡಾರಗಳನ್ನು ಗರಡಿ ಬೈಲ್ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆಗೊಂಡು ಹೋಗಿ ಅಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶಪೂಜೆ,ದೈವಸ್ಥಾನದಲ್ಲಿ ಹೊಸ ಮಂಚ ಪ್ರತಿಷ್ಠೆ, ದೈವಗಳಿಗೆ ಸಾನಿಧ್ಯ ಕಲಶಾಬಿಷೇಕ, ತಂಬಿಲ ಸೇವೆ,ಸಂಕ್ರಮಣ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರು,ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಿಂಬಾಡಿ, ಸಂತೋಷ ಕುಮಾರ್ ರೈ ಪಲತಡ್ಕ,ಧರ್ಮಪಾಲ ಮರಕಡ, ಮಾಯಿಲಪ್ಪ ಗೌಡ ಎಣ್ಮೂರು, ಧರ್ಮಣ್ಣ ಗರಡಿ, ಪವಿತ್ರ ಮಲ್ಲೆಟಿ, ಮಾಲಿನಿ ಕದ್ವ,ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.



































































































Leave a Comment

Your email address will not be published. Required fields are marked *

error: Content is protected !!
Scroll to Top