ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ (ರಿ )ಸುಳ್ಯ
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ.
ಪ್ರಗತಿಬಂಧು ಸ್ವ ಸಹಾಯ ಸಂಘ ಸಂಘಗಳ ಒಕ್ಕೂಟ ಜಾಲ್ಸೂರು ವಲಯ.
ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ದೇವಾಲಯ ಸಂವರ್ಧನಾ ಸಮಿತಿ ಸುಳ್ಯ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ
ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಸಮಾರೋಪ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯರಾಮ ವಿನೋಬನಗರ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾದ ಸುಧಾಕರ ಕಾಮತ್ ಅವರು ಮಾತನಾಡಿ ಭಜನಾ ತರಬೇತಿದಾರರು ಮಕ್ಕಳಿಗೆ ಒಳ್ಳೆಯ ಹಾಡುಗಾರಿಕೆ ಯಿಂದ ಸ್ಪೂರ್ತಿ ಮತ್ತು ಪ್ರೇರಣೆಯನ್ನು ತುಂಬುತ್ತಾ ಬಂದಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತ ಬಂದಿದೆ ಎಂದು ಹೇಳಿದರು.
ಯೋಜನಾಧಿಕಾರಿ ಮಾಧವ ಗೌಡ ಮಾತಾಡಿ ಮಕ್ಕಳಿಗೆ ಸಂಸ್ಕಾರ & ಮಾರ್ಗದರ್ಶನ ಕೊಟ್ಟರೆ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ತಾಲೂಕಿನ ಭಜನಾ ಪರಿಷತ್ ನಲ್ಲಿ ನಡೆಯುವ ಮಕ್ಕಳ ಭಜನಾ ತರಬೇತಿ & ಸಂಸ್ಕಾರ ಶಿಬಿರ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. ತರಬೇತಿ ನೀಡಿದ ಕೊಟ್ಟ ತರಬೇತುದಾರರಿಗೆ ಮತ್ತು ತರಬೇತಿಗೆ ಕಳಿಸಿಕೊಟ್ಟ ತಂದೆ ತಾಯಿಯಂದರಿಗೆ ತುಂಬಾ ಅಭಾರಿಯಾಗಿದ್ದೇನೆ, ಕಾರ್ಯಕ್ರಮಕ್ಕೆ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು .
ಮೋಹನ್ ನಂಗಾರು ಕಾರ್ಯಾಧ್ಯಕ್ಷರು ಶ್ರೀ ಸುಬ್ರಮಣ್ಯ ಸ್ವಾಮಿ ಪರಿವಾರ ದೈವಗಳ ಜೀರ್ಣೋದ್ದಾರ ಸಮಿತಿ ಅಡ್ಕಾರು,ಇವರು ಮಾತನಾಡಿ ತರಬೇತಿಯಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಕ್ಕಿದಂತಾಗಿದೆ ಎಂದು ಹೇಳಿ ಶುಭಹಾರೈಸಿದರು.
ಜಯರಾಮ ರೈ ಅಧ್ಯಕ್ಷರು ಶ್ರೀಗುರು ರಾಘವೇಂದ್ರ ಭಜನಾ ಮಂದಿರ ಜಾಲ್ಸೂರು ಅವರು ಮಾತನಾಡಿ ಭಜನೆಯಲ್ಲಿ ವಿಭಜನೆವಿಲ್ಲ ವ್ಯಕ್ತಿ ಶಕ್ತಿ ಆಗಬಲ್ಲ ವ್ಯಕ್ತಿಗೆ ಸಂಸ್ಕಾರ ಹೇಳಿಕೊಡಬೇಕು ಎಂದು ಹೇಳಿದರು.
ಶ್ರೀ ಪ್ರಸಾದ್ ಆಲೆಟ್ಟಿ ನಿಕಟಪೂರ್ವ ಗೌರವಅಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲ್ಲೂಕು, ಶ್ರೀ ಬಾಲಸುಬ್ರಹ್ಮಣ್ಯ ಬೈತಡ್ಕ ಅಧ್ಯಕ್ಷರು ಉತ್ಸವ ಸಮಿತಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು. ಶ್ರೀ ಹರಿಪ್ರಕಾಶ್ ಅಡ್ಕಾರು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀಸುಬ್ರಮಣ್ಯ ಸ್ವಾಮಿದೇವಸ್ಥಾನ ಅಡ್ಕಾರು. ಗಿರಿಧರ ಗೌಡ ಅಧ್ಯಕ್ಷರು ಶ್ರೀ ಕೃಷ್ಣ ಭಜನಾ ಮಂದಿರ ಸೋಣಂಗೆರಿ ದಯಾನಂದ ಗುಡ್ಡೆಮನೆ ವಲಯ ಅಧ್ಯಕ್ಷರು ಜಾಲ್ಸೂರು ವಲಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧ್ಯಾನ &ಸಂಸ್ಕಾರ ಗುರುಗಳಾದ ಶ್ರೀವರ ಪಾಂಗಣ್ಣಾಯ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು.ಕುಳಿತು ಭಜನೆ ತರಬೇತುದಾರರಾದ ಗಣೇಶ ಜಾಲ್ಸೂರು ಮತ್ತು ಕುಣಿತ ಭಜನೆ ತರಬೇತಿದಾರರು ಸದಾನಂದ ಆಚಾರ್ಯ ಅವರನ್ನು ಗುರುವಂದನ ಕಾರ್ಯಕ್ರಮದೊಂದಿಗೆ ಗೌರವಿಸಲಾಯಿತು.
ಮಾತಾ ಪಿತ ರ ಪಾದ ಪೂಜೆ ಕಾರ್ಯಕ್ರಮವನ್ನು ಶ್ರೀವರ ಪಾಂಗಣ್ಣಾಯ ಪ್ರಧಾನ ಅರ್ಚಕರು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು ಇವರು ನಡೆಸಿಕೊಟ್ಟರು.
ಸುಳ್ಯ ತಾಲೂಕು ಜನಜಾಗೃತಿ ನೂತನ ಅಧ್ಯಕ್ಷರಾದ ವೆಂಕಪ್ಪ ಗೌಡ ನಿಕಟ ಪೂರ್ವ ಅಧ್ಯಕ್ಷರಾದ ಲೋಕನಾಥ ಅಮೆಚೂರು ಉಪಸ್ಥಿತರಿದ್ದರು .
ಅಧ್ಯಕ್ಷರು/ಪದಾಧಿಕಾರಿಗಳು ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು.
ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸುರ್ ವಲಯ ಅಧ್ಯಕ್ಷರು, ಪದಾಧಿಕಾರಿಗಳು,
ಜಾಲ್ಸಾರು ವಲಯ ಭಜನಾ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು,ವಲಯ ಮೇಲ್ವಿಚಾರಕಾರು ಸೇವಾಪ್ರತಿನಿಧಿಗಳು, ಶಿಬಿರಾರ್ಥಿ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಭಾಸ್ಕರ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು ವಲಯದ ಮೇಲ್ವಿಚಾರಕರು ಜಯಶ್ರೀ ಸ್ವಾಗತಿಸಿ. ಜಾಲ್ಸೂರು ಭಜನಾ ಪರಿಷತ್ ಕಾರ್ಯದರ್ಶಿ ಗಿರಿಧರ ಗೌಡ ವಂದಿಸಿದರು.
ಅಡ್ಕಾರು : ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಸಮಾರೋಪ






















































