ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಚಂದನಾ ಯುವತಿ ಮಂಡಲ (ರಿ) ಅಡ್ತಲೆ -ಅರಂತೋಡು ಇವರ ಸಹಯೋಗದೊಂದಿಗೆ ಮೇ. ೩೧ ರಂದು ನಡೆಯಿತು. ಇದು ಆರಂತೋಡು ಗ್ರಾಮ ಪಂಚಾಯತ್ ನ ನಿರಂತರ ೮೪ನೇ ತಿಂಗಳ ಕಾರ್ಯಕ್ರಮವಾಗಿದ್ದು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಚಂದನಾ ಯುವತಿ ಮಂಡಲ (ರಿ) ಅಡ್ತಲೆ -ಆರಂತೋಡು ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು,ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರು ಪಂಚಾಯತ್ ಸದಸ್ಯರು,ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಘಟಕ ಸಿಬ್ಬಂದಿಗಳು ಹಾಗೂ ಆರಂತೋಡು ಪೇಟೆಯ ನಿವಾಸಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಸಿದ್ದರು.
ಅರಂತೋಡು : ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ
























































