ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4ನೇಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಸುಳ್ಯದಲ್ಲಿ ಶುಭಾರಂಭಗೊಂಡಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರು ಫಾ.ಅಲ್ವಿನ್ ಡಿ‌.ಕುನ್ಹಾ ಟೈಲ್ಸ್ ಮಳಿಗೆ ಉದ್ಘಾಟಿಸಿದರು.
ಸಯ್ಯದ್ ಸಹೀರ್ ತಂಗಳ್ ಕುಂಬೋಳ್ ಮಳಿಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಟಾರ್ ಟೈಲ್ಸ್ ಮಳಿಗೆಯ ಮಾಲಕ ರಿಯಾಝ್.ಪಿ.ಬಿ, ಸ್ಟಾರ್ ಗ್ರೂಪ್‌ನ ಸ್ಥಾಪಕ ಬಾಬಾ ಕುಂಞ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ,ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ.ಮಾಜಿ ಸದಸ್ಯೆ ಸರಸ್ವತಿ ಕಾಮತ್, ವರ್ತಕರ ಸಂಘದ, ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಇಂಜಿನಿಯರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಕೃಷ್ಣ,ಎಸಿಎಫ್ ಪ್ರಶಾಂತ್ ಪೈ, ಪ್ರಮುಖರಾದ, ಪಿ.ಮಯೂರ್ ಅಂಬೆಕಲ್ಲು,ಸಂತೋಷ್ ಕುತ್ತಮೊಟ್ಟೆ, ಹೇಮಂತ್ ಕಾಮತ್, ಮಹಮ್ಮದ್ ಕೆ.ಎಂ.ಅಬ್ದುಲ್ ಲತೀಫ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾರ್ ಟೈಲ್ಸ್ ಮಳಿಗೆ ಸಿಬ್ಬಂದಿ ಹರಿಪ್ರಸಾದ್ ಅಡ್ತಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಜಟ್ಟಿಪಳ್ಳ ಸ್ಮರಣಿಕೆ ನೀಡಲು ಸಹಕರಿಸಿದರು.
ಟೈಲ್ಸ್ ಖಾರ್ಕನೆಯಿಂದ ಸ್ಟಾರ್ ಟೈಲ್ಸ್ ಮೂಲಕ ನೇರ ನಿಮ್ಮ ಮನೆ ಬಾಗಿಲಿಗೆ ತಲುಪಿಸುವಂತ ವ್ಯವಸ್ಥೆ ಸ್ಟಾರ್ ಟೈಲ್ಸ್ ನವರ ವೈಶಿಷ್ಟ್ಯ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್‌ಗಳ ಅತ್ಯಪೂರ್ವ ಸಂಗ್ರಹದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಎಂ ಕೆ ರೆಸ್ಸಿಡೆನ್ಸಿ ಕಟ್ಟಡದಲ್ಲಿ ಸುಮಾರು 9000 ಚದರಡಿಯ, ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿರುವ,ನಗು ಮೊಗದ ಅನುಭವಿ ಸಿಬ್ಬಂದಿಗಳನ್ನು ಹೊಂದಿರುವ
ಬ್ರಹತ್ ಟೈಲ್ಸ್ ಮಳಿಗೆಯಾಗಿದೆ.
ಸುಮಾರು 730ಕ್ಕೂ ಅಧಿಕ ಮನಮೋಹಕ ವಿನ್ಯಾಸ ಗಳೊಂದಿಗೆ,ಜನ ಸಾಮಾನ್ಯರ ಕೈಗೆಟಕುವ
ಮಿತ ದರದ ಕೊಡುಗೆಯೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಟೈಲ್ಸ್ ಶೋರೂಮ್ ಆಗಿರುತ್ತದೆ. ಅಲ್ಲದೆ ಪ್ರತಿಯೊಂದು ವಿನ್ಯಾಸವೂ ಸುಮಾರು 15000 ಚದರಡಿ ಸ್ಟಾಕ್ ಸದಾ ಲಭ್ಯವಿರುತ್ತದೆ.
ಎಲ್ಲಾ ತರಹದ ಟೈಲ್ಸ್ , ಸಾನಿಟರಿವೇರ್ ,
ಪ್ಲಂಬಿಂಗ್ & ಇಲೆಕ್ಟ್ರಿಕಲ್ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರ ಅನುಕೂಲಕ್ಕಾಗಿ ದೊರೆಯುತ್ತದೆ
ಸುಳ್ಯ ಜನತೆಯ ಕನಸಿನ ಮನೆ, ಕಟ್ಟಡಗಳ ನಿರ್ಮಾಣದ ಕನಸು ಇನ್ನು ಸ್ಟಾರ್ ಟೈಲ್ಸ್ ಮೂಲಕ ಸಾಕಾರಗೊಳ್ಳಲಿದೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ನಡೆಯಿತು.









































































































Leave a Comment

Your email address will not be published. Required fields are marked *

error: Content is protected !!
Scroll to Top