ಅರಂತೋಡು : ನೂತನ ಮದರಸಕ್ಕೆ ಶಿಲಾನ್ಯಾಸ ಮತ್ತು ಮಸೀದಿಯ ಮೇಲಂತಸ್ತು ಕಟ್ಟಡಕ್ಕೆ ಜಿಪ್ರಿ ತಂಙಳ್ ರಿಂದ ಶಂಕುಸ್ಥಾಪನೆ

ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಮತ್ತು ನುಸ್ರತುಲ್ ಇಸ್ಲಾಂ ಮದರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜೂ.9 ರಂದು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಪ್ರಿ ಮುತ್ತುಕೊಯ ತಂಙಳ್ ನೆರವೇರಿಸಿದರು. ಅವರು ಮಾತನಾಡಿ ಕಟ್ಟಡಕ್ಕೆ ವಸ್ತು ರೂಪದಲ್ಲಿ, ಹಣದ ರೂಪದಲ್ಲಿ ಸಹಾಯ, ಸಹಕಾರ ನೀಡಿದ ದಾನಿಗಳನ್ನು, ವಕ್ಪ್ ಇಲಾಖೆಯನ್ನು  ಮತ್ತು ಅನುದಾನ ತರಿಸಿದ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಅಭಿನಂಧಿಸಿ ವಿಶೇಷ ದುವಾ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ ಆಸಿಫ್ ಅಝ್ಹರಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು.
ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಸ್ವಾಗತಿಸಿದರು. ಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಯ್ಶ ಕೆ.ಎಂ ಮುಸ್ತಫ, ಹಾಜಿ ಇಬ್ರಾಹಿಂ ಕತ್ತರ್, ಹಮೀದ್ ಹಾಜಿ ಸುಳ್ಯ, ಹಾಜಿ ಹೆಚ್ ಎ ಅಬ್ಬಾಸ್ ಕಲ್ಲುಗುಂಡಿ, ಮಹಮ್ಮದ್ ನವಾವಿ ಮುಂಡೋಳೆ, ತಾಜ್ ಮೊಹಮ್ಮದ್ ಸಂಪಾಜೆ, ಹಸೈನಾರ್ ಧರ್ಮತಣಿ, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಅಹ್ಮದ್ ಸುಫ್ರಿಮ್, ಅಹಮ್ಮದ್ ಪಾರೆ, ಪೆರಾಜೆ ಜಮಾಅತ್ ಅಧ್ಯಕ್ಷ ನಾಸಿರ್ ಇಂಜಿನಿಯರ್, ಅರಂತೋಡು ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಮದರಸ ಉಸ್ತುವಾರಿ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ., ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ, ದುಬೈ ಸಮಿತಿ ಗೌರವಾಧ್ಯಕ್ಷ ಹಾಜಿ ಬದುರುದ್ದೀನ್ ಪಠೇಲ್, ಸೈಫುಧೀನ್ ಪಠೇಲ್, ರಹೀಂ ಉದಯನಗರ, ಅನ್ವಾರ್, ಸೌಧಿ ಸಮಿತಿಯ ಇಸಾಕುದ್ಧೀನ್, ಸ್ವಲಾತ್ ಸಮಿತಿ ಕೋಶಾಧಿಕಾರಿ ಸಂಶುಧೀನ್ ಪೆಲ್ತಡ್ಕ, ಎ.ಹೆಚ್ ವೈ.ಎ ಉಪಾಧ್ಯಕ್ಷ ಅಝಾರುದ್ದೀನ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಮನ್ಸೂರ್ ಪಾರೆಕ್ಕಲ್, ಕೆ.ಎಂ ಮೊಯಿದು ಕುಕ್ಕುಂಬಳ , ವಿವಿಧ ಮಸೀದಿಗಳ ಖತೀಬರಾದ ರುಕ್ಮಾನ್ ನುಲ್ ಹಕೀಮ್ ಸಂಪಾಜೆ, ನಾಸಿರ್ ದಾರಿಮಿ ಕಲ್ಲುಗುಂಡಿ, ಮೋಈನುದ್ಧೀನ್  ಫೈಝಿ, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಮಹಮ್ಮದ್ ಶಮೀಮ್ ಅರ್ಷದಿ ಮಂಡೆಕೋಲು, ಟಿ.ಎಂ ಜಾವೇದ್ ತೆಕ್ಕಿಲ್, ರವೂಫ್ ಅಝ್ಹರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಮುಜೀಬ್ ಅರಂತೋಡು, ಎ.ಎ ಹನೀಫ್, ಸಂಶುದ್ಧೀನ್ ಕ್ಯೂರ್, ಎಸ್.ಕೆ.ಹನೀಫ್ ಸಂಪಾಜೆ, ಪಸೀಲು ಮೊದಲಾದವರು ಉಪಸ್ಥಿತರಿದ್ದರು.











































































































Leave a Comment

Your email address will not be published. Required fields are marked *

error: Content is protected !!
Scroll to Top