ಸುಳ್ಯ: ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಕ್ಷಮೆಯಿರಲಿ ತಂದೆ’
ಜೂನ್ 12ರಂದು (ನಾಳೆಯಿಂದ) ಸುಳ್ಯ ಸೇರಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುಳ್ಯ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ ಮಧ್ಯಾಹ್ನ 2.30 ಹಾಗೂ ರಾತ್ರಿ 7.30ಕ್ಕೆ ಪ್ರದರ್ಶನ ಇರಲಿದೆ ಎಂದು ಚಿತ್ರಸ ಮಾರ್ಕೆಟಿಂಗ್ ಉಸ್ತುವಾರಿ ವಹಿಸಿರುವ ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ.
ಈಗಾಗಲೇ ಚಿತ್ರೀಕರಣ ಹಾಗು ಇತರ ಕೆಲಾ ಮುಗಿಸಿ ಜೂನ್ 12ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಪ್ರಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ರಾಮಕೃಷ್ಣ (ಮೇಕಪ್) ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಅನಾವರಣ ಮಾಡಿದರು. ಚಿತ್ರದ ಟ್ರೇಲರ್ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ಎಂ ಎನ್ ಸುರೇಶ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಗೆಲ್ಲಲಿ ಎಂದು ಅತಿಥಿಗಳು ಹಾರೈಸಿದರು.
ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎನ್ ಎಂ ಸುರೇಶ್, ನಾನು ಕೆಲವು ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದೆ. ಪೂರ್ಣ ಪ್ರಮಾಣದ ನಿರ್ಮಾಪಕನಾಗಿರುವುದು ಈ ಚಿತ್ರದಿಂದ. ಇನ್ನೂ, ನಿರ್ದೇಶನ ನಾನು ಮಾಡಬೇಕೆಂದು ಕೊಂಡಿರಲಿಲಲ್ಲ ನನ್ನ ಕಾರ್ಯವೈಖರಿ ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಎಂದರು. ಮೊದಲ ನಿರ್ದೇಶನದ ಜೊತೆಗೆ ಚಿತ್ರ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಶೀರ್ಷಿಕೆಯೇ ತಿಳಿಸುವಂತೆ ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಹರೀಶ್ ಅವರು ಕಥೆ ಬರೆದಿದ್ದಾರೆ. ಮಂಜುನಾಥ್ ಹೆಗ್ಡೆ, ರೇಣುಕಾಬಾಲಿ , ಶ್ರೀಮಂತ, ವಿನ್ಯಾಶೆಟ್ಟಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ನಾನು ಸಹ ನಟಿಸಿದ್ದೇನೆ. ಸೂರ್ಯಕಾಂತ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ ಹಾಗೂ ಪುಣ್ಯೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರ ಜೂನ್ 12 ರಂದು ತೆರೆಗೆ ಬರಲಿದೆ. ನನ್ನ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ನಟ ಶ್ರೀಮಂತ, ಕಥೆ ಬರೆದಿರುವ ಹರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ಅಹಲ್ಯ ಸುರೇಶ್,ಸಂಕಲನಕಾರ ಮುತ್ತುರಾಜ್ ಕಲಾವಿದರಾದ ಶಿವಕುಮಾರ್ ಆರಾಧ್ಯ,ಜಗದೀಶ್ ಜಾಲ,ರಂಗಸ್ವಾಮಿ,ಶಾಸ್ತ್ರೀ,ಚಂದ್ರಕಾಂತ್,ಕಲಾ ನಿರ್ದೇಶಕ ಅರುಣ್ ಸಾಗರ್, ಚಲನಚಿತ್ರದ ಸಹ ನಿರ್ಮಾಪಕ, ಉಸ್ತುವಾರಿ ಸುಪ್ರೀತ್ ಮೋoಟಡ್ಕ ನಿರ್ವಹಿಸಿರುತ್ತಾರೆ.
ಚಲನಚಿತ್ರ,ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಸುರೇಶ್, ಇದೇ ಮೊದಲ ಬಾರಿ ನಿರ್ದೇಶನ, ನಿರ್ಮಾಣ ಎರಡನ್ನು ನಿಭಾಯಿಸಿ ‘ಕ್ಷಮೆಯಿರಲಿ ತಂದೆ’ಎಂಬ ಚಿತ್ರ ಸಿದ್ಧಪಡಿಸಿದ್ದಾರೆ.
ಕ್ಷಮೆಯಿರಲಿ ತಂದೆ ಶೀರ್ಷಿಕೆಗೆ ತಕ್ಕಂತೆ ತಂದೆ ಮಗನ ಬಾಂಧವ್ಯ ಹೇಳುವಂಥ ಕಥೆ, ಸಾಕಷ್ಟು ಮನ ಮಿಡಿಯುವ ಸನ್ನಿವೇಶಗಳು ಚಿತ್ರದಲ್ಲಿವೆ ಅನ್ನೋದು ಚಿತ್ರತಂಡದ ಮಾಹಿತಿ.
ಮಂಜುನಾಥ್ ಹೆಗಡೆ, ರೇಣುಕಾ ಬಾಲಿ, ಶ್ರೀಮಂತ, ವಿನ್ಯ ಶೆಟ್ಟಿ, ಮೂಗು ಸುರೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಟ್ರೇಲರ್ನಲ್ಲೇ ಗಮನ ಸೆಳೆದ “ಕ್ಷಮೆಯಿರಲಿ ತಂದೆ” ಸಿನಿಮಾ ನಾಳೆ(ಜೂ.12) ತೆರೆಗೆ: ಈ ಚಿತ್ರದ ಮೂಲಕ ನಿರ್ಮಾಣ ಹಾಗೂ ನಿರ್ದೇಶನಕ್ಕೆ ನಟ ಎಂ.ಎನ್ ಸುರೇಶ್ ಎಂಟ್ರಿ

























































