ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ವಿಶ್ವ ತಾಯಂದಿರ ದಿನದ ಪ್ರಯುಕ್ತ ಆಯೋಜಿಸಿದ ಸುಳ್ಯ ತಾಲೂಕು ಮಟ್ಟದ ‘ತಾಯಿಯೊಂದಿಗೆ ನಾನು’ ಫೋಟೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರಧಾನ ಸಮಾರಂಭ
ಜೂ. 20ರಂದು ಶ್ರೀರಾಂಪೇಟೆಯಲ್ಲಿರುವ ಕಾನತ್ತಿಲ ಕಾಂಪ್ಲೇಕ್ಸ್ ನಲ್ಲಿರುವ ದೇವಮ್ಮ ಸಭಾಂಗಣದಲ್ಲಿ ನಡೆಯಿತು.
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು.
ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷೆ ಎಂ.ಬಿ. ಸದಾಶಿವರವರು
ಆಲೆಟ್ಟಿ ಆರೋಗ್ಯ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ
ಶ್ರೀಮತಿ ಯಶಸ್ವಿನಿ ಪಿ.ಸಿ ಯವರಿಗೆ
ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಣಲ್, ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಪಯಸ್ವಿನಿ ಚಾರಿಟೇಬಲ್ ಟ್ರಸ್ಟ್
ಅಧ್ಯಕ್ಷ ಜಯಪ್ರಕಾಶ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಕಟ ಪೂರ್ವಾಧ್ಯಕ್ಷ
ಸುರೇಶ್ ಕಾಮತ್, ಕಾರ್ಯಕ್ರಮ ಸಂಯೋಜಕಿ ಶೋಭಾ ಅಶೋಕ್ ಚೂಂತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಯಿಯೊಂದಿಗೆ ನಾನು ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿಯನ್ನು ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ ವಾಚಿಸಿದರು.
ಜೇಸಿಐ ಸುಳ್ಯ ಪಯಸ್ವಿನಿ ಜತೆ ಕಾರ್ಯದರ್ಶಿ ಜೇಸಿ. ವಿನೋದ್ ಮೂಡಗದ್ದೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ,
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ, ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ತಾರಾ ಮಾಧವ ಚೂಂತಾರು ವಂದಿಸಿದರು.
ಸುಳ್ಯ : ತಾಯಿಯೊಂದಿಗೆ ನಾನು’ಫೋಟೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ





























































