ಪಂಜ : ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು ಸಭಾಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಧು ಚಂದ್ರ ಆಚಾರ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಸೀತಾರಾಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಯೋಗ ಶಿಕ್ಷಕರರಾದ ಕುಸುಮಧರ ಕೆಮ್ಮೂರು ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ ಮುಖ್ಯ ಶಿಕ್ಷಕಿ ಸರೋಜಿನಿ ಕೆಮ್ಮೂರು ಸ್ವಾಗತಿಸಿದರು. ಶಿಕ್ಷಕಿ ವನಜ ಕೊಡಂಕೆರಿ ನಿರೂಪಿಸಿದರು,
ಶಿಕ್ಷಕಿ ವಿದ್ಯಾಶ್ರೀ, ಎಸ್ ಡಿ ಎಂ ಸಿ ಸದಸ್ಯರು,ಹೆತ್ತವರು ಹಾಗೂ ಶಾಲಾ
ಮಕಲು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಂಜ : ನಾಗತೀರ್ಥ ಶಾಲೆಯಲ್ಲಿ ಯೋಗ ದಿನಾಚರಣೆ





























































