ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಸಿಂಧೂರ ವಸ್ತ್ರ ಮಳಿಗೆ ಶುಭಾರಂಭ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಸಿಂಧೂರ ಶೋರೂಂ ವಸ್ತ್ರ ಮಳಿಗೆ ಜೂ.೨೭ರಂದು ಅದ್ಧೂರಿಯಾಗಿ ಶುಭಾರಂಭಗೊಂಡಿದೆ.
ಸುಳ್ಯದ ಕೆ.ವಿ.ಜಿ. ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ| ಗೀತಾ ದೊಪ್ಪರವರು ದೀಪ ಬೆಳಗಿ ನೂತನ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಗಾಯಕಿ ಪೂರ್ಣಿಮಾ ಕೃಷ್ಣರಾಜ್, ದಯಾಮಣಿ ಹೇಮಂತ್, ಲತಾ ರೈ ಬೂಡು, ಶೈಲಜಾ, ಮಂಜುಳಾ ಬಡಿಗೇ‌ರ್, ಮೋಹಿನಿ ವಿಶ್ವನಾಥ್, ಧರ್ಮಕಲಾ, ರಜನಿ, ಶಾಲಿನಿ, ದೇವಿಶ್ರೀ, ಜಯಶ್ರೀ, ಕುಸುಮಾ, ಪುಷ್ಪಾ, ವರ್ತಕರ ಸಂಘದ ಗೌರವಾಧ್ಯಕ್ಷರಾದ ಸುಧಾಕರ ರೈ ಪಿ.ಬಿ., ಗಾಯಕ ಕೃಷ್ಣರಾಜ್ ಕೇರ್ಪಳ ಶುಭಹಾರೈಸಿದರು.ಸಿಂಧೂರ ವಸ್ತ್ರ ಮಳಿಗೆಯ ಮಾಲಕರಾದ ಧನ್ ರಾಮ್ ಉಪಸ್ಥಿತರಿದ್ದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.ಉದ್ಘಾಟನೆಯ ಪ್ರಯುಕ್ತ ೧೦೦೦ ಮಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಯಿತು. ಈ ಕೊಡುಗೆ ಸ್ವೀಕರಿಸಲು ಸಿಂಧೂರ ಶೋರೂಂ ಮಳಿಗೆಯ ಎದುರು ಬೆಳಗ್ಗೆ ೮.೩೦ರಿಂದಲೇ ಜನರು ಸಾಲಾಗಿ ನಿಂತಿದ್ದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಕೂಪನ್ ನೀಡಲಾಯಿತು. ಬಳಿಕ ಎಲ್ಲರೂ ಸಂಸ್ಥೆಯ ಒಳಗೆ ಹೋಗಿ ಮಹಿಳೆಯರು ಸಾರಿ ಹಾಗೂ ಪುರುಷರು ಶರ್ಟ್‌ಗಳನ್ನು ಪಡೆದುಕೊಂಡರು.250 ಮಂದಿಗೆ ಅಟೋ ಚಾಲಕರಿಗೆ ಖಾಕಿ ಶರ್ಟ್‌ನ್ನು ಉಚಿತವಾಗಿ ಕೊಡುಗೆ ನೀಡಲಾಯಿತು.





















































































































Leave a Comment

Your email address will not be published. Required fields are marked *

error: Content is protected !!
Scroll to Top