ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ
ವಿಜ್ಞಾನ ಸಂಘ, ಕ್ರೀಡಾ ಸಂಘ, ಪರಿಸರ ಸಂಘ
ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಗಳಿಗೆ
ಅಧಿಕೃತವಾಗಿ ಜೂ. 27 ರಂದು ಚಾಲನೆ ನೀಡಲಾಯಿತು
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ
ಗುರುರಾಜ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೂವತೈದು ವರ್ಷಗಳ ಹಿಂದೆ
ರಾಯಚೂರು ಜಿಲ್ಲೆ ಸಿಂಧನೂರಿನಿಂದ ಬಂದು ದೈಹಿಕ ಶಿಕ್ಷಕರಾಗಿ ಅಜ್ಜಾವರದಲ್ಲಿ 1986-1991 ರವರೆಗೆ ಐದು ವರ್ಷಗಳ ಕಾಲ
ಸೇವೆ ಸಲ್ಲಿಸಿದ್ದ ಶಿವ ಬಸಪ್ಪ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ
ಗೌರವಿಸಲಾಯಿತು . ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ,
ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಇದರ ಟ್ರಸ್ಟಿ ಶಶ್ಮಿ ಭಟ್, ಮುಖ್ಯೋಪಾಧ್ಯಾಯರಾದ ಗೋಪಿನಾಥ ಎಂ , ಹಿರಿಯ ಶಿಕ್ಷಕರಾದ ವಿದ್ಯಾ ಶಂಕರಿ ಯಸ್ , ಶಿಕ್ಷಕರಾದ ಚಂದ್ರಶೇಖರ್ ಭಟ್ ಉಷಾ ಕೆ ಎಸ್ , ದೈಹಿಕ ಶಿಕ್ಷಣ ಶಿಕ್ಷಕರಾದ ರೇವತಿ ಪಿ ಮತ್ತು ಅತಿಥಿ ಶಿಕ್ಷಕರಾದ ರಾಜೇಶ್ವರಿ ಪಿ ಕೆ , ಕಂಪ್ಯೂಟರ್ ಶಿಕ್ಷಕರಾದ ಮೋನಿಕಾ , ಶಾಲಾ ವಿದ್ಯಾರ್ಥಿ ನಾಯಕ ಸೂರ್ಯತೇಜ, ಉಪ ನಾಯಕಿ ರಾಹಿಲಾ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು . ಶಾಲಾ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಎಂ ಸ್ವಾಗತಿಸಿ, ಚಂದ್ರಶೇಖರ್ ಭಟ್ ವಂದಿಸಿದರು.ಶಿಕ್ಷಕರಾದ ಅಶೋಕ್ ಕೆ ಎಸ್ ಅವರು ಕಾರ್ಯಕ್ರಮ ನಿರೂಪಿಸಿದರು.
ಅಜ್ಜಾವರ : ಶಾಲಾ ವಿವಿಧ ಸಂಘಗಳ ಉದ್ಘಾಟನೆ













