ಸುಳ್ಯದ ಆದರ್ಶ ಸೌಹಾರ್ದ ಸಹಕಾರ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮಿಪೂಜೆ ಮತ್ತು ಗಣಹೋಮ

ಸಹಕಾರಿ ರತ್ನ ಸವಣೂರು ಕೆ. ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಳ್ಯ ಶಾಖೆಯಲ್ಲಿ ಸಂಘ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪೂಜೆ ಮತ್ತು ಗಣಹೋಮ ಜೂ. 28ರಂದು ಪುರೋಹಿತರಾದ ಶಿವಕುಮಾರ್ ಭಟ್ ಎಡಮಂಗಲರವರ ನೇತೃತ್ವದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾಗಿರುವ ಕೆ. ಸೀತಾರಾಮ ರೈ ಸವಣೂರು, ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ಸುಳ್ಯ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ
ಪ್ರಭಾಕರನ್ ನಾಯರ್, ನ್ಯಾಯವಾದಿ ಎನ್. ಜಯಪ್ರಕಾಶ್ ರೈ, ಆದರ್ಶ ಸಹಕಾರ ಸಂಘದ ನಿರ್ದೇಶಕ ಬಾಪು ಸಾಹೇಬ್, ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ನಾಮ ನಿರ್ದೇಶನ ಸದಸ್ಯ ರಾಜು ಪಂಡಿತ್, ಪ್ರಧಾನ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ
ಸುನಾದ್ ರಾಜ್ ಶೆಟ್ಟಿ, ಸುಳ್ಯ ಶಾಖೆಯ ವ್ಯವಸ್ಥಾಪಕರಾದ ನಿಖಿಲ್ ಬಿ.ಎಸ್, ನಿವೃತ್ತ ವ್ಯವಸ್ಥಾಪಕರುಗಳಾದ ಮನೋಜ್ ಕುಮಾರ್ ಕುರುಂಜಿಭಾಗ್, ರಾಧಾಕೃಷ್ಣ ಚಾಕೋಟೆ,
ರೈ ಎಸೋಷಿಯೇಟ್ಸ್ ಸಿಬ್ಬಂದಿ
ವಿಜಯ ಪ್ರಕಾಶ್ ಸುಳ್ಯ, ಸುಳ್ಯ ಶಾಖೆಯ ಸರಪರಾದ ತೀರ್ಥರಾಮ ಕಾಯರ್ತೋಡಿ ಸೇರಿದಂತೆ ಸಂಘದ ಸಿಬ್ಬಂದಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top