ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಅಜ್ಜಾವರ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಪೇರಾಲು ಪೇರಾಲು .ಎ , ಮಂಡೆಕೋಲು, ಕಲ್ಲಡ್ಕ ಪೆರಾಜೆ ಪ್ರಗತಿ ಬಂಧು ಸ್ವ ಸಹಾಯ ಸಂಘ ಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜೂ.28 ರಂದು ಆ ಪೇರಾಲು ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕನೆಮರಡ್ಕ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೆ ಧ ಗ್ರಾ ಯೋ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮತ್ತು ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡ, ತಾಲೂಕು ಯೋಜನಾಧಿಕಾರಿ ಗಳಾದ ಮಾಧವ ಗೌಡ ಆಗಮಿಸಿದ್ದರು. ಪ್ರತಿಷ್ಠಿತ ಶ್ರೀಪಾದ ಕನ್ಸಲ್ಟೆನ್ಸಿ , ಸಂಸ್ಥೆಯ ಇಂಜಿನಿಯರ್ ಆಗಿರುವ ಶ್ರೀಮತಿ ಡಾ. ಸೌಮ್ಯ ಎನ್ ಜೆ ಅಡ್ಡಂತಡ್ಕ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಸಭೆಯನ್ನು
ಉದ್ಘಾಟಿಸಿ ಮಾತಾಡಿದ ಜಿಲ್ಲಾ ನಿರ್ದೇಶಕರು ಕರ್ನಾಟಕ ರಾಜ್ಯದಾದ್ಯಂತ ಯೋಜನೆಯು ಕಾರ್ಯಾಚರಿಸುತ್ತಿದ್ದು ಸಾವಿರಾರು ಸದಸ್ಯರ ಮತ್ತು ಅವರ ಕುಟುಂಬಕ್ಕೆ ದಾರಿದೀಪವಾಗಿದೆ, ಸದಸ್ಯರ ಕುಟುಂಬಗಳಲ್ಲಿರುವ ಸದಸ್ಯರಿಗೆ ಆರೋಗ್ಯ ಭದ್ರತೆ, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆ.ವೃದ್ಧರಿಗೆ ವೃದ್ಧಾಪ್ಯ ವೇತನ , ಕೆರೆ ಕಲ್ಯಾಣಿಗಳ ಸ್ವಚ್ಛತೆ, ಮಠ ಮಂದಿರಗಳ ಪುನರುಜ್ಜೀವನ,
ಸರಕಾರಿ ಶಾಲೆಗಳಿಗೆ ಪೀಠೋಪಕರಣಗಳು, ಹೀಗೇ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಜನೆಯು ಉತ್ತಮ ಸೇವೆಯನ್ನು ನೀಡಿ ಬಡವರ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದರು.
ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡರು ಮಾತಾಡಿ ಯೋಜನೆಯ ಅಂಗಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಮದ್ಯವ್ಯಸನ ಚಟಕ್ಕೆ ಬಲಿಯಾದ ಸಾವಿರಾರು ಜನರನ್ನು ವ್ಯಸನದಿಂದ ಮುಕ್ತ ಗೊಳಿಸಿ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದೆ ಎಂದರು. ತಾಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಯೋಜನೆಯ ಕಾರ್ಯಕ್ರಮಗಳನ್ನು ಸವಿವರವಾಗಿ ವಿವರಿಸಿ ಸಂಘದ ಸದಸ್ಯ
ಸದಸ್ಯರಿಗೆ ಶುಭ ಹಾರೈಸಿದರು.
ಸಭೆಯಲ್ಲಿ ಪೇರಾಲು – ಅಂಬ್ರೊಟಿ,ಮಂಡೆಕೋಲು, ಕಲ್ಲಡ್ಕ – ಪೆರಾಜೆ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಭಾರತೀಯ ಸೇನೆಯಲ್ಲಿ 41 ವರ್ಷ ಗಳ ಕಾಲ ಸೇವೆ ಸಲ್ಲಿಸಿ. ನಿವೃತ್ತಿ ಹೊಂದಿದ ಶ್ರೀ ಪದ್ಮನಾಭ ಸೊರಂಜ ಇವರನ್ನು ಯೋಜನೆಯವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಕಾಡುಸೊರಂಜ.
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇದರ ಮೇಲುಸ್ತುವಾರಿ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಮೋಹನ್ ದಾಸ್ ಕುಕ್ಕುಡೇಲು,
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಜ್ಜಾವರ ವಲಯ ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕನೆಮರಡ್ಕ
ಯೋಜನೆಯ ಅಜ್ಜಾವರ ವಲಯದ ಮೇಲ್ವಿಚಾರಕರಾದ ಶ್ರೀಮತಿ ಅನಿತಾ,ಸೇವಾಪ್ರತಿ ನಿಧಿ ಗಳಾದ ಶ್ರೀಮತಿ ವಸಂತಿ, ಶ್ರೀಮತಿ ವೇದಾ ಮೂರು ಒಕ್ಕೂಟಗಳ ನಿಕಟ ಪೂರ್ವ ಮತ್ತು ನಿಯೋಜಿತ ಪದಾಧಿಕಾರಿಗಳು ಉಪಸ್ತಿತರಿದ್ದರು.CSC ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪೇರಾಲು – ಅಂಬ್ರೊಟಿ ಒಕ್ಕೂಟದ ನಿಯೋಜಿತ ಅಧ್ಯಕ್ಷರಾದ ಶ್ರೀ ನವೀನ್ ಯಾವಟೆ ಎಲ್ಲರನ್ನೂ ಸ್ವಾಗತಿಸಿದರು.
ಒಕ್ಕೂಟದ ನಿಯೋಜಿತ ಕಾರ್ಯದರ್ಶಿ ಶ್ರೀ ಹರೀಶ್ ಕುಂಟಿಕಾನ ಧನ್ಯವಾದ ಸಮರ್ಪಿಸಿದರು.
ಒಕ್ಕೂಟದ ನಿಯೋಜಿತ ಅಧ್ಯಕ್ಷರಾದ ನವೀನ್ ಯಾವಟೆ ಕಾರ್ಯಕ್ರಮ ನಿರೂಪಿಸಿದರು
ಅಜ್ಜಾವರ ವಲಯದ ಒಕ್ಕೂಟ ಪದಪ್ರದಾನ ಸಮಾರಂಭ






























































