ರಾಜ್ಯ ಸರಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹ ಜ್ಯೋತಿಯನ್ನು ಕೆಲವು ಅನರ್ಹರು ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಹರ ಆಯ್ಕೆಗಾಗಿ ಪುನರ್ ಪರಿಶೀಲನೆಗೆ ಆದೇಶ ನೀಡಿದ್ದು ಅದರಂತೆ ಅರಂತೋಡು ಮೆಸ್ಕಾಂ ಶಾಖಾ ಕಚೇರಿಯಲ್ಲಿ ದಾಖಲೆಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಭೇಟಿ ನೀಡಿದರು.
ಇಲ್ಲವನ್ನು ಇಲ್ಲಿಯೇ ಪರಿಶೀಲಿಸುವುದಲ್ಲ.ನೆಟ್ ವರ್ಕ್ ಇರುವ ಪ್ರದೇಶಗಳಿಗೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.ಪ್ರತಿಯೊಬ್ಬ ಪಲಾನುಭವಿಯ ದಾಖಲೆಯ ಪರಿಶೀಲನೆ ನಡೆಸಬೇಕು.ಯಾರನ್ನೂ ಕೈ ಬಿಡುವ ಹಾಗಿಲ್ಲ ಎಂದು ಸೂಚಿಸಿದರು.
ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ತಾಜುದ್ದೀನ್ ಅರಂತೋಡು,ಜುಬೀರ್ ಅರಂತೋಡು ಹಾಗೂ ಇತರರು ಉಪಸ್ಥಿತರಿದ್ದರು.
ಅರಂತೋಡು ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಭೇಟಿ ನೀಡಿದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್




































































