ಸುಳ್ಯದಲ್ಲಿ ಶ್ರೀ ಇನ್ಫೋ ಲ್ಯಾಪ್‌ಟಾಪ್‌ ಸೆಂಟರ್ ಲೋಕಾರ್ಪಣೆ

ಸುಳ್ಯದಲ್ಲಿ ಸತೀಶ್ ಕಾಟೂರು ಹಾಗೂ ಶ್ರೀವತ್ಸ ಕಾಟೂರು ಮಾಲೀಕತ್ವದ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್‌ ಸಹ ಸಂಸ್ಥೆ ನೂತನ ಎಕ್ಸ್‌ಕ್ಯೂಸಿವ್ ಲ್ಯಾಪ್‌ಟಾಪ್ ಶೋರೂಮ್ ‘ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್’ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಜುಲೈ 16 ರಂದು ಶುಭಾರಂಭಗೊಂಡಿತು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು .ಭಾಗೀರಥಿ ಮುರುಳ್ಯ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ” ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನಗಳ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಮೊಬೈಲ್ ಹಾಗೂ ಲ್ಯಾಪ್ ಟಾಪ್ ,ಕಂಪ್ಯೂಟರ್ ಗಳು ಇಲ್ಲದೇ ಯಾವುದೇ ಕೆಲಸಗಳು ಆಗದಂತಾಗಿದೆ. ಇಂದಿನ ಈ ನೂತನ ಎಕ್ಸ್ ಕ್ಲೂಸಿವ್ ಲ್ಯಾಪ್ ಟಾಪ್ ಮಳಿಗೆಯು ಎತ್ತರಕ್ಕೆ ಬೆಳೆಯಲಿ ” ಎಂದು ಶುಭಹಾರೈಸಿದರು.
ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ. ಬಿ ಸುಧಾಕರ ರೈ ನೆಟ್ ಕಾo ಮಾತನಾಡಿ ” ಇಂದಿನ ಕಾಲ ಸ್ಪರ್ಧಾತ್ಮಕ ಯುಗವಾಗಿದೆ. ನಾವು ಎಲ್ಲಿದ್ದರೂ ಮೊಬೈಲ್ ನಲ್ಲಿ ಬುಕ್ಕಿಂಗ್ ಮಾಡಿದರೆ ಎಲ್ಲಾ ವಸ್ತುಗಳು ಮನೆಗೆ ತಲುಪುತ್ತಿದೆ. ಅದೇ ರೀತಿ ತಂತ್ರಜ್ಞಾನಗಳ ಯುಗ ಎತ್ತರಕ್ಕೆ ಬೆಳೆದಿದೆ. ಹಾಗೂ ಆನ್ಲೈನ್ ಮೂಲಕ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿ ಮಾಡುತ್ತಿದ್ದು ಆನ್ಲೈನ್ ಖರೀದಿಯನ್ನು ಕಮ್ಮಿ ಮಾಡಿ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಗುಣಮಟ್ಟ ಮತ್ತು ಸರ್ವೀಸ್ ಗಳನ್ನೂ ನೋಡಿ ಖರೀದಿ ಮಾಡುವ ಪದ್ಧತಿ ಅಳವಡಿಸಿಕೊಳ್ಳಬೇಕು ಹಾಗೂ ವ್ಯಾಪಾರಸ್ಥರಿಗೆ ಪ್ರಯೋಜನವಾಗುವಂತೆ ಗ್ರಾಹಕರು ಯೋಚಿಸಬೇಕಾಗಿದೆ ” ಎಂದು ಶುಭ ಹಾರೈಸಿದರು.
ಸೌಪರ್ಣಿಕಾ ಆರ್ಕೇಡ್ ಮಾಲಕ ನಾರಾಯಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಬಳಿಕ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್‌ನ ಮಾಲಕರಾದ ಸತೀಶ್ ಕಾಟೂರು, ಶ್ರೀವತ್ಸ ಕಾಟೂರು, ರಾಧಿಕಾ ಕಾಟೂರು, ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಅನೀಶ್‌ನಾದ್ , ಪ್ರಮುಖರಾದ ಶ್ರೀನಿವಾಸ ಉಬರಡ್ಕ, ಸುಬೋದ್ ಶೆಟ್ಟಿ ಮೇನಾಲ,ಮಹೇಶ್ ಮೇರ್ಕಜೆ, ಸತೀಶ್ ಕುಂಭಕ್ಕೋಡು, ಸತೀಶ್ ಹೊದ್ದೆಟ್ಟಿ , ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ, ಕಾರ್ಯದರ್ಶಿ ಶಶಿಧರ ಉಬರಡ್ಕ, ಪದ್ಮನಾಭನ್ ನಾಯರ್ ಮಧುವನ, ಭಾಸ್ಕರನ್ ನಾಯರ್, ಪ್ರಭಾಕರನ್ ನಾಯರ್ ಸಿ.ಎಚ್, ಗಿರೀಶ್ ಕಲ್ಲುಗದ್ದೆ, ಕಿಶೋರಿ ಶೇಟ್, ಭವಾನಿಶಂಕರ ಕಲ್ಮಡ್ಕ, ದೇವಿಪ್ರಸಾದ್ ಅತ್ಯಾಡಿ, ಪ್ರಸಾದ್ ಕಾಟೂರು, ಕೃಷ್ಣಕುಮಾರ್, ಲೋಕೇಶ್ ಕೆರೆಮೂಲೆ, ಪ್ರವೀಣ್ ಕಾಟೂರು, ರಾಜೇಶ್ ಮೇನಾಲ, ಮೊದಲಾದವರು ಉಪಸ್ಥಿತರಿದ್ದರು.
ಸತೀಶ್ ಕಾಟೂರು ಸರ್ವರನ್ನು ಸ್ವಾಗತಿಸಿ, ವಂದಿಸಿ, ಉದಯಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
ಹಾಗೂ ನಮ್ಮಲ್ಲಿ ನೂತನ ಲ್ಯಾಪ್‌ಟಾಪ್ ಖರೀದಿಸುವ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಹಳೆಯ ದರದಲ್ಲಿಯೇ ನೂತನ ಲ್ಯಾಪ್‌ಟಾಪ್ ಖರೀದಿಸುವ ಸುವರ್ಣಾವಕಾಶವನ್ನೂ ನೀಡಲಾಗಿದೆ. ಸೀಮಿತ ಸ್ಟಾಕ್ ಮಾತ್ರ ಲಭ್ಯವಿದ್ದು ಸೀಮಿತ ಅವಧಿಗೆ ಈ ಆಫರ್ ನೀಡಲಾಗುವುದು.ಹೊಸ ದರದಲ್ಲಿಯೂ ಅತ್ಯಧುನಿಕ ವಿನ್ಯಾಸದ ಆಕರ್ಷಕ ಲ್ಯಾಪ್‌ಟಾಪ್‌ಗಳು ಲಭ್ಯವಿದೆ. ಅಲ್ಲದೆ ಪ್ರತಿ ಲ್ಯಾಪ್‌ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ. ಅಲ್ಲದೆ ಪ್ರತಿ ವಾರ ಡ್ರಾ ನಡಸಿ ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಲ್ಯಾಪ್‌ಟಾಪ್ ಖರೀದಿಗೆ ಆಕರ್ಷಕ ಆಫರ್‌ಗಳನ್ನು ನೀಡಲಾಗುವುದು. ಲ್ಯಾಪ್‌ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ. ಲ್ಯಾಪ್‌ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು . ನಮ್ಮಲ್ಲಿ ಉದ್ಘಾಟನೆಯ ಪ್ರಯುಕ್ತ ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್‌ನಲ್ಲಿ ಆಕರ್ಷಕ ಆಫರ್‌ಗಳು ಲಭ್ಯವಿದೆ. ಎಲ್ಲಾ ಬ್ರಾಂಡ್‌ಗಳ ಆಕರ್ಷಕ ಲ್ಯಾಪ್‌ಟಾಪ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ರಿಯಾಯತಿ ದರದಲ್ಲಿ ಲಭ್ಯವಿದೆ. ಅಲ್ಲದೆ ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್‌ಟಾಪ್‌ಗಳ ಸ್ಟಾಕ್‌ಗಳು ಲಭ್ಯವಿದೆ. ಆಫಲ್ ಮ್ಯಾಕ್‌ಬುಕ್, ಏಸರ್, ಡೆಲ್, ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳು ಇದೆ. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್‌ನಲ್ಲಿ ಐಫೋನ್, ನತ್ತಿಂಗ್, ಸ್ಯಾಮ್‌ಸಂಗ್, ನೋಕಿಯಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್‌ಗಳು ಕೂಡ ಲಭ್ಯವಿದೆ. ತಮ್ಮ ಇಷ್ಟದ ಲ್ಯಾಪ್‌ಟಾಪ್‌ಗಳ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್‌ನ ಮಾಲಕರಾದ ಸತೀಶ್ ಕಾಟೂರು ಹಾಗೂ ಶ್ರೀವತ್ಸ ಕಾಟೂರು ತಿಳಿಸಿದ್ದಾರೆ.

































































































































Leave a Comment

Your email address will not be published. Required fields are marked *

error: Content is protected !!
Scroll to Top