ಶಾಲಾ ಬಸ್‌ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ಸಾವು



































































































































ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಬರಿಮಾರು ಸಮೀಪ ಕಲ್ಲಡ್ಕ ಶ್ರೀರಾಮ ಶಾಲೆಯ ಬಸ್‌ ಮೇಲೆ ಬೃಹತ್ ಮರ ಬಿದ್ದು ಐದು ವರ್ಷದ ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ದಾರುಣವಾಗಿ ಮೃತಪಟ್ಟಿದ್ದಾಳೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಆಕಸ್ಮಿಕ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ ಮತ್ತಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಳಿಯೂರಿನ ತೋಟ ನಿವಾಸಿ ನಿವಾಸಿ ಚಂದ್ರಹಾಸ್ ಎಂಬವರ ಪುತ್ರಿ ಎಲ್ ಕೆಜಿ ವಿದ್ಯಾರ್ಥಿನಿ ಚಿರಾನ್ವಿ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಎಂಬವರ ಪುತ್ರಿ ಅನ್ವಿ, ಪೆರ್ನೆ ನಿವಾಸಿ ಕ್ಷಿತಿ ರೈ ಹಾಗೂ ಬಸ್‌ ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top