ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತನ್ನ ಖಾತೆ ತೆರೆದಿದೆ. ಪೋಲಿಯೊ ಪೀಡಿತ ಝಂದು ಕುಮಾರ್ (28) ಅವರು ಪುರುಷರ ಹೆವಿವೇಯ್ಡ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಶುಕ್ರವಾರ (ಜುಲೈ 24) ಆರಂಭವಾದ ಕೂಟದಲ್ಲಿ 181 ಕೆ.ಜಿ ಮತ್ತು 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದ ಅವರು, 196 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಟ್ಟು 130.9 ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನ ಪಡೆದು, ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಪ್ಯಾರಾ ಪವರ್‌ಲಿಪ್ಟರ್ ಅಶೋಕ್ ಮಲಿಕ್ ಅವರು 4ನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕದಿಂದ ವಂಚಿತರಾದರು.
ಭಾರತದ ಜಂದು ಕುಮಾರ್‌ಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ





































































