ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಗೂ ಸಂಪಾಜೆ ಪಯಸ್ವಿನಿ ಪ್ರಾ.ಕೃ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಆದಂ ಕುಂಞ(62) ಸಂಟ್ಯಾರ್ರವರು ಹೃದಯಾಘಾತದಿಂದ ಜು.25ರಂದು ನಿಧನರಾದರು. ಸಂಪಾಜೆಯಲ್ಲಿ ಪಯಸ್ವಿನಿ ಸಹಕಾರಿ ಬ್ಯಾಂಕ್ನ ಮಹಾಸಭೆ ನಡೆಯುತ್ತಿತ್ತು. ಅವರು ಮಹಾಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ಕುಸಿದು ಕುಳಿತರೆನ್ನಲಾಗಿದೆ. ತಕ್ಷಣವೇ ಅವರನ್ನು ಕಾರಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಸಭೆಯಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದು ಸಾವು




















