ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ!

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆ ಮಾಪನ ಸಮರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸುಳ್ಯ ತಹಶೀಲ್ದಾರ್ ಮಂಜುಳ ಬಹಿರಂಗ ಪಡಿಸಿದ್ದಾರೆ.
ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆ.7ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪ್ರಕೃತಿ ವಿಕೋಪದ ಪ್ರಗತಿ ಪರಿಶೀಲನಾ ಅಧಿಕಾರಿಗಳ ಸಭೆಯಲ್ಲಿ ಸಚಿವರ ಪ್ರಶ್ನೆಗೆ ಉತ್ತರಿಸಿದರು.
ಶಾಸಕಿ ಭಾಗೀರಥಿ ಮುರುಳ್ಯರು ಮಳೆ ಮಾಪನ ಸಮರ್ಪಕವಾಗಿ ಕಾರ್ಯನಿರ್ವಾಹಿಸದೆ ಕಳೆದ ಬಾರಿ ಅನೇಕ ರೈತರಿಗೆ ಬೆಳೆ ವಿಮೆ ದೊರೆಯದೆ ಅನ್ಯಾಯವಾಗಿದೆ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ತಹಶೀಲ್ದಾರಿಂದ ಮಾಹಿತಿ ಪಡಕೊಂಡರು.ಈ ಮಾಹಿತಿ ಕೇಳಿ ಸಚಿವರು ಇದು ರೈತರಿಗೆ ಮಾಡುವ ಅನ್ಯಾಯ,ಅವರು ವಿಮೆ ಕಟ್ಟುವುದಿಲ್ಲವೇ ಎಂದು ಕೇಳಿದರು.ಅಲ್ಲದೆ ವಿಷಯವನ್ನು ಜಿಲ್ಲಾಧಿಕಾರಿ ದರ್ಶನ್ ಅವರ ಗಮನಕ್ಕೆ ತಂದು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಬಳಿಕ ಸಂಬಂಧಪಟ್ಟ ಇಲಾಖೆಯವರೊಂದಿಗೆ ಪೋನ್ ಮುಖಾಂತರ ಮಾತನಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದರು.ವಿವಿಧ ಇಲಾಖೆಗಳಿಂದ ಸಚಿವರು ಮಾಹಿತಿ ಪಡಕೊಂಡು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ್ ಸದಸ್ಯ ಹರೀಶ್ ಕನಿಷ್ಠ ವೇತನ ಸಲ‌ಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ಕುಮಾರ್,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು( ಸುದ್ದಿಯ ಮುಂದುವರಿದ ಭಾಗವನ್ನು ಮುಂದಿನ ಸುದ್ದಿಯಲ್ಲಿ ನೀಡಲಾಗುವುದು)



















Leave a Comment

Your email address will not be published. Required fields are marked *

error: Content is protected !!
Scroll to Top