ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ

























ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಆ.18ರಂದು ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನ‌ ನೂರಾರು ಆಟೋಚಾಲಕರು(ಬಿ.ಎಂ.ಎಸ್ ಸಂಯೋಜಿತ) ಭಾಗಿಯಾದರು.
ತಾಲೂಕಿನಾದ್ಯಂತ ಸುಳ್ಯ ನಗರ ಕಲ್ಲುಗುಂಡಿ, ಪಂಜ, ಎಡಮಂಗಲ, ಗುತ್ತಿಗಾರು ಸುಬ್ರಮಣ್ಯ, ಹರಿಹರ, ಕಲ್ಮಕಾರು ಜಾಲ್ಸೂರು, ಕುಕ್ಕುಜಡ್ಕ, ಪೆರಾಜೆ ಘಟಕಗಳಿಂದ ಆಟೋ ಚಾಲಕರು ಭಾಗಿಯಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ತಾಲೂಕು ಆಟೋ ಚಾಲಕರ ಅಧ್ಯಕ್ಷರಾದ ಪ್ರಕಾಶ್ ಎಂ .ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಪೈಚಾರ್, ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ನಿರ್ದೇಶಕರುಗಳಾದ ಭಾನುಪ್ರಕಾಶ್, ಲೋಕೇಶ್, ಶಂಕರ, ವೇಣುಗೋಪಾಲ ನಾಯರ್, ರೋಹಿತ್, ಕಾರ್ತಿಕ್ ಜಗದೀಶ್ N R, ಭಾಸ್ಕರ್ ,ವಿಶ್ವನಾಥ, ಜಯರಾಮ, ಜನಾರ್ದನ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ,ಮಾಜಿ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ , ಎಲ್ಲಾ ಘಟಕಗಳ ಪದಾಧಿಕಾರಿಗಳು ಸದಸ್ಯರು ಭಾಗಿಯಾಗಿದರು.

Leave a Comment

Your email address will not be published. Required fields are marked *

error: Content is protected !!
Scroll to Top