ದೇವರ ಕೊಲ್ಲಿ ಸಮೀಪ ಲಾರಿಯೊಂದು ಅಪಘಾತವಾಗಿ ಟಿ.ಟಿ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮವಾಗಿ ಪ್ರಯಾಣಿಕರಿಗೆ ಗಾಯವಾದ ಘಟನೆ ಆಗಸ್ಟ್ 26ರಂದು ಸಂಜೆ ನಡೆದಿದೆ.
ಗುಜರಾತಿನ ಅಹಮದಾಬಾದ್ ನಿವಾಸಿಗಳ ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಹೋಗುತ್ತಿದ್ದಾಗ ದೇವರಕೊಲ್ಲಿಯ ಅಬ್ಬಿ ಫಾಲ್ಸ್ ಬಳಿ ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಇದೇ ವೇಳೆ ಅದೇ ಮಾರ್ಗವಾಗಿ ಸುಳ್ಯ ಕಡೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಮಗುಚಿ ಬಿತ್ತು. ಪರಿಣಾಮವಾಗಿ ಟಿಟಿ ವಾಹನದಲ್ಲಿದ್ದ 7 ಜನ ಪ್ರಯಾಣಿಕರಿದ್ದು ಲಾರಿ ಚಾಲಕ ಕ್ಲೀನರ್ ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಆಂಬುಲೆನ್ಸ್ ಗಳ ಮೂಲಕ ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೀಗ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಗಿದ್ದು,ಗಾಯಾಳನ್ನುಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ದೇವರಕೊಲ್ಲಿ : ಟಿ.ಟಿ ವಾಹನದ ಮೇಲೆ ಮಗುಚಿ ಬಿದ್ದ ಲಾರಿ, ಚಾಲಕ ಹಾಗೂ ಕ್ಲೀನರ್ ಸೇರಿ ಮೂವರು ಗಂಭೀರ


















