ಸೆ. 6 : ಸುಳ್ಯದಲ್ಲಿ “ಸ್ವರ್ಣಂ ಕೃಷ್ಣಂ” – ಮುದ್ದು ಮಕ್ಕಳ ಶ್ರೀ ಕೃಷ್ಣವೇಷ ಸ್ಪರ್ಧೆ

ಸುಳ್ಯದ ಸರಕಾರಿ ಬಸ್ ನಿಲ್ದಾಣದ ಎದುರಿನ ಸುಂತೋಡು ಎಂಪೋರಿಯದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಂ ಜ್ಯುವೆಲ್ಸ್ ವತಿಯಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಸ್ವರ್ಣಂ ಕೃಷ್ಣಂ” ಮುದ್ದು ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಸೆ. 6 ರಂದು ಅಪರಾಹ್ನ ಮಳಿಗೆಯಲ್ಲಿ ನಡೆಯಲಿದೆ.





























ಸುಳ್ಯ ತಾಲೂಕು ಹಾಗೂ ಅವಿಭಜಿತ ಸುಳ್ಯ ತಾಲೂಕಿನ ಮಕ್ಕಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು 0-2 ವರ್ಷದ ಮಕ್ಕಳಿಗೆ ಮತ್ತು 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿರುತ್ತದೆ. ಸ್ಪರ್ಧಿಗಳಿಗೆ 1 ನಿಮಿಷ ಕಾಲಾವಕಾಶವಿದ್ದು
ಹಿನ್ನೆಲೆ ಧ್ವನಿ ಉಪಯೋಗಿಸಬಹುದು. ಎರಡು ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆ ವಿಜೇತರಿಗೆ ಬೆಳ್ಳಿ ನಾಣ್ಯವೂ ಸಿಗಲಿದೆ. ಅಲ್ಲದೆ ಭಾಗವಹಿಸುವ ಪ್ರತಿ ಮಗುವಿಗೂ ಪ್ರಮಾಣ ಪತ್ರ ಕೊಡಲಾಗುವುದು. ಅತ್ಯುತ್ತಮ ಶ್ರೀ ಕೃಷ್ಣ ವೇಷದ ಪುಟಾಣಿ ಮಕ್ಕಳ ಫೋಟೋಗಳು ಸ್ವರ್ಣಂ ನ ಜಾಹೀರಾತಿನಲ್ಲಿಯೂ ಪಾಲು ಪಡೆಯಲು ಸುವರ್ಣ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಸೆ. 4 ರ ಸಂಜೆ 5 ಗಂಟೆಯ ಒಳಗೆ ತಮ್ಮ ಹೆಸರನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಬಹುದು. ಎರಡು ವಿಭಾಗಗಳಲ್ಲಿಯೂ ಮೊದಲು ಹೆಸರು ನೋಂದಾಯಿಸಿದ 30 ಮಕ್ಕಳಿಗೆ ಮಾತ್ರ ಅವಕಾಶ ಇರುವುದು. ಸ್ಪರ್ಧೆ ಕೂಡ ಹೆಸರು ನೋಂದಾಯಿಸಿದ ಆದ್ಯತೆಯಲ್ಲಿ ನಡೆಯಲಿದೆ. ಮೊಬೈಲ್ ಸಂಖ್ಯೆ : 7975425067

Leave a Comment

Your email address will not be published. Required fields are marked *

error: Content is protected !!
Scroll to Top