ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಆಚರಣೆ

ನಿವೇದಿತಾ ಮಹಿಳಾ ಮಹಿಳಾ ಜಾಗೃತಿ ಟ್ರಸ್ಟ್ ವತಿಯಿಂದ ಜಯನಗರದಲ್ಲಿರುವ ನಿಸರ್ಗ ಮಸಾಲ ಫ್ಯಾಕ್ಟರಿಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು ನಿಸರ್ಗ ಮಾಸಾಲ ಫ್ಯಾಕ್ಟರಿ ಮಾಲಕರಾದ ಶ್ರೀ ಕಸ್ತೂರಿ ಶಂಕರ್ ಮತ್ತು ಉಷಾ ರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು ಮುಖ್ಯ ಅಭ್ಯಾಗತರಾದ ಶ್ರೀಮತಿ ಚಂದ್ರಮತಿ.ಕೆ. ನಿವೃತ್ತ ಪ್ರೌಢಶಾಲಾ ಶಿಕ್ಷಕರು ಹಳೆ ಗೇಟು ಸುಳ್ಯ ಇವರು ರಕ್ಷಾ ಬಂಧನ ಆಚರಣೆಯ ಮಹತ್ವ ತಿಳಿಸಿದರು.ಆರಕ್ಷಕ ಠಾಣೆಯ ಅಧಿಕಾರಿ ಜ್ಯೋತಿ ಅವರು,” ಅಕ್ಕಪಡೆ ” ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಜಾಗೃತಿ ಗಾಗಿ ಗಿಡ ನೆಟ್ಟು ರಾಖಿ ಕಟ್ಟಲಾಯಿತು. ಅಧ್ಯಕ್ಷೆ ಪುಷ್ಪಾ ಮೇದಪ್ಪ ಸ್ವಾಗತಿಸಿ ಶುಭ ಹಾರೈಸಿದರು ಈ ಸಂದರ್ಭ, ಗುಣವತಿ ಕೊಲ್ಲಂತಡ್ಕ,ಶಾರದಾ ಶೆಟ್ಟಿ ವೀಣಾ ಮೋಂಟಡ್ಕ, ರಾಜೀವಿ ಪರ್ಲಿಕಜೆ ಇಂದಿರಾ ಶಾಂತಿನಗರ ಹಾಗೂ ಆ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಉಪಸ್ಥಿತರಿದ್ದರು ಶಶಿಕಲಾ. ಎ.ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.































Leave a Comment

Your email address will not be published. Required fields are marked *

error: Content is protected !!
Scroll to Top