ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ, ಬಯಂಬು, ಅಜ್ಜಾವರ ಇದರ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಅಜ್ಜಾವರ ಇದರ ವತಿಯಿಂದ ಹದಿನಾರನೇ ವರ್ಷದ ಸಾಮೂಹಿಕ
ಶ್ರೀ ವರಮಹಾಲಕ್ಷ್ಮಿ ಪೂಜೆಯು ಶ್ರೀ ಮಾತಾ ಸಭಾಭವನ, ಶ್ರೀ ಮಹಿಷಮರ್ದಿನಿ ದೇವಸ್ಥಾನ, ಅಜ್ಜಾವರದಲ್ಲಿ ಆ.28ರಂದು ವೇದಮೂರ್ತಿ ಸದಾನಂದ ಶಾಸ್ತ್ರಿಯವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಬೆಳಗ್ಗೆ ಭಜನಾ ಕಾರ್ಯಕ್ರಮವನ್ನು
ಶ್ರೀವರಮಹಾಲಕ್ಷ್ಮಿ ಭಜನಾ ಸಮಿತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಅಜ್ಜಾವರ ಇವರು ನಡೆಸಿಕೊಟ್ಟರು.
ಶ್ರೀ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ರಕ್ಷಾಬಂಧನ ಆಚರಿಸಲಾಯಿತು. ರಕ್ಷಾ ಬoಧನದ ವಿಚಾರವಾಗಿ ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ ಉಪನ್ಯಾಸ ನೀಡಿದರು.ಮಧ್ಯಾಹ್ನ ಮಹಾಪೂಜೆ ನಡೆದು,ಪೂಜೆಗೆ ಆಗಮಿಸಿದ ಎಲ್ಲ ಭಕ್ತಾಭಿಮಾನಿಗಳಿಗೆ ಬೆಳಗಿನ ಉಪಾಹಾರ ಹಾಗೂ ಅನ್ನಪ್ರಸಾದದ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಬಯಂಬು ಶಾರದಾರಾಮ ಸೇವಾ ಪ್ರತಿಷ್ಠಾನದ ಧರ್ಮದರ್ಶಿ ಎ.. ಭಾಸ್ಕರರಾವ್ ಬಯಂಬು, ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ಕರುಣಾಕರ ಅಡ್ಪಂಗಾಯ, ಅಧ್ಯಕ್ಷರಾದ ಕು. ಲಕ್ಷ್ಮೀ ಪಲ್ಲತ್ತಡ್ಕ, ಕಾರ್ಯದರ್ಶಿ ಶ್ರೀಮತಿ ವಿಮಲಾರುಣ ಪಡ್ಡಂಬೈಲು, ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಸುಬ್ರಹ್ಮಣ್ಯ ಕರ್ಲಪ್ಪಾಡಿ ಜತೆ ಕಾರ್ಯದರ್ಶಿ ಶ್ರೀಮತಿ ಮೋಹಿನಿ ನಾರಾಯಣ ಅಜ್ಜಾವರ, ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಜಯಂತಿ ಜನಾರ್ಧನ, ಕೋಶಾಧಿಕಾರಿ ಶ್ರೀಮತಿ ಮೋಹಿನಿ ಜಯರಾಮ ಬಾಳಿಲ, ಸವೇರಾ ರೈ ಬೇಲ್ಯ ಹಾಗೂ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು. ನಿರೂಪಣೆಯನ್ನು ವಿಶಾಲ ಕರ್ಲಪ್ಪಾಡಿ ನೆರವೇರಿಸಿದರು.
ಅಜ್ಜಾವರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ



















