ಮಂಡೆಕೋಲು: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಕಾಳುಮೆಣಸು ಹಾಗೂ ಕಾಫಿಗಿಡಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯಕ್ರಮವು ಸಂಘದ ಕೇಂದ್ರ ಕಛೇರಿಯ ಆವರಣದಲ್ಲಿ ನಡೆಯಿತು.
ಈಗಾಗಲೇ ಗಿಡಗಳ ವಿತರಣೆಯ ಯೋಜನೆ ಘೋಷಿಸಿದ ಒಂದೇ ವಾರದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಮಿಕ್ಕಿದ ಗಿಡಗಳಿಗೆ ಬೇಡಿಕೆ ಬಂದಿದ್ದು ಈಗಾಗಲೇ ಹದಿಮೂರು ಸಾವಿರ ಗಿಡಗಳ ವಿತರಣೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ರೈ ಪೇರಾಲುಗುತ್ತು, ಶಿವಪ್ರಸಾದ್ ಉಗ್ರಾಣಿಮನೆ, ಉಪಾಧ್ಯಕ್ಷರಾದ ಪುರುಷೋತ್ತಮ ಕೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ನಿರ್ದೇಶಕರುಗಳಾದ ಕೇಶವಮೂರ್ತಿ ಹೆಬ್ಬಾರ್, ಲಕ್ಷ್ಮಣ ಉಗ್ರಾಣಿಮನೆ, ಆಶಿಕ್ ದೇವರಗುಂಡ, ರಾಜಣ್ಣ ಪೇರಾಲುಮೂಲೆ, ಉಮೇಶ್ ಎಂ, ಲಿಂಗಪ್ಪ ಬದಿಕಾನ, ಶಶಿಧರ ಕಲ್ಲಡ್ಕ, ಸದಾನಂದ ಎಂ, ಜಯಶ್ರೀ ಚೌಟಾಜೆ, ತುಳಸಿನಿ ದೇವರಗುಂಡ, ಈಶ್ವರಚಂದ್ರ ಕಡಂಬಳಿತ್ತಾಯ, ಉದಯಕುಮಾರ್ ಆಚಾರ್, ಜನಾರ್ಧನ ಬರೆಮೇಲು, ಕೃಷ್ಣಮಣಿಯಾಣಿ ಅಕ್ಕಪ್ಪಾಡಿ, ಶಶಿಧರ ಕಡಂಬಳಿತ್ತಾಯ, ಜಲಜ ದೇವರಗುಂಡ, ಮೋಹಿನಿ ಬಿ, ರಾಮಚಂದ್ರ ಮಾಸ್ತರ್, ಗಂಗಾಧರ ಮಾವಂಜಿ, ಪುರುಷೋತ್ತಮ ಪಾತಿಕಲ್ಲು, ಮೋನಪ್ಪ ಪೆರಾಜೆ, ವಿಶ್ವನಾಥ ಅಕ್ಕಪ್ಪಾಡಿ, ಚಂದ್ರಾವತಿ ಪೆರಾಜೆ, ಚಂದ್ರಶೇಖರ ಆಲಂಕಳ್ಯ, ದಿವ್ಯಲತಾ ಚೌಟಾಜೆ, ಪ್ರಶಾಂತ್ ಬೊಳುಗಲ್ಲು, ಚಂಚಲಾಕ್ಷಿ, ಪುಷ್ಪಾವತಿ ಬೊಳುಗಲ್ಲು, ಸಿಬ್ಬಂಧಿವರ್ಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಸ್ಥೆಯ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಕಾಳುಮೆಣಸು ಹಾಗೂ ಕಾಫಿಗಿಡ ವಿತರಣೆ

























