ಪಂಜ ದೇವಸ್ಥಾನದಲ್ಲಿ ನವರಾತ್ರಿ ಪೂಜೆ: ಭಜನಾ ಸಂಕೀರ್ತನೆ, ತಬಲಾ-ಕೀಬೋರ್ಡ್ ವಾದನ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.11ರಂದು ಆರಂಭಗೊಂಡಿದ್ದು, ಅ.20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.12ರಂದು ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಹಾಗೂ ಅಲ್ಪ ಚಿಂಗಾಣಿಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಮಾಸ್ಟರ್ ಪ್ರಕುಲ್ ತೋಟ ಅವರು ತಬಲಾ ಮತ್ತು ಕೀಬೋರ್ಡ್ ವಾದನದ ಮೂಲಕ ಭಕ್ತರನ್ನು ರಂಜಿಸಿದರು.
ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.
ಅ.13ರಂದು ಭಜನೆ, ಭರತನಾಟ್ಯ
ನವರಾತ್ರಿ ಮಹೋತ್ಸವದ ಅಂಗವಾಗಿ ಅ.13ರಂದು ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ಐವರ್ನಾಡಿನ ಭೈರವಿ ನಾಟ್ಯಾಲಯದ ಕು. ಅದಿತಿ ಲಕ್ಷ್ಮಿ ನಾಯರ್‌ಕೆರೆ ಹಾಗೂ ಕು. ವರ್ಷ ನೆಲ್ಲಿಗದ್ದೆ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.



















Leave a Comment

Your email address will not be published. Required fields are marked *

error: Content is protected !!
Scroll to Top