ಯುವಕವಿ ಎಂ. ಎ. ಮುಸ್ತಫಾ ಬೆಳ್ಳಾರೆಯವರಿಗೆ ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ ಅ 18ರಂದು ಕಾಸರಗೋಡು ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಜರುಗಿದ್ದು ಈ ಸಂದರ್ಭದಲ್ಲಿ ಯುವಕವಿ,ಸುಳ್ಯ ತಾಲೂಕಿನ ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆಯ ವರದಿಗಾರ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026ನ್ನು ಪ್ರದಾನ ಮಾಡಲಾಯಿತು.ವೇದಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ(ರಿ)ಮೈಸೂರು ಇದರ ಸಂಸ್ಥಾಪಕರಾದ ಚುಟುಕು ಯುಗಾಚಾರ್ಯ ಡಾ:ಎಂ.ಜಿ.ಆರ್ ಅರಸ್,ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ:ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ,ಖ್ಯಾತ ಕವಿಗಳಾದ ಗುಣಾಜೆ ರಾಮಚಂದ್ರ ಭಟ್,ಖ್ಯಾತ ಕವಯಿತ್ರಿಗಳಾದ ಸತ್ಯವತಿ ಭಟ್ ಕೊಳಚಪ್ಪು, ಸಾಹಿತಿ,ವೈದ್ಯರಾದ ಡಾ: ಸುರೇಶ್ ನೆಗಳಗುಳಿ,ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಇರಾ ನೇಮು
ಪೂಜಾರಿ,ಮಂಗಳೂರು ಕಥಾಬಿಂದು ಪ್ರಕಾಶನದ ಸ್ಥಾಪಕ ಸಂಚಾಲಕರಾದ ಪಿ.ವಿ.ಪ್ರದೀಪ್ ಕುಮಾರ್,ಪತ್ರಕರ್ತರು,ಸಾಹಿತ್ಯ ಸಂಘಟಕರಾದ ಜಯಾನಂದ ಪೆರಾಜೆ,ಕಾಸರಗೋಡು ಕನ್ನಡ ಭವನದ ಪ್ರಮುಖರಾದ ಪ್ರದೀಪ್
ಬೇಕಲ್,ಡಾ.ಕೆ.ಎನ್ ವೆಂಕಟರಮಣ ಹೊಳ್ಳ,ವಾಮನ್ ರಾವ್ ಬೇಕಲ್,ಸಂಧ್ಯಾರಾಣಿ ಟೀಚರ್,ಕವಿಯಿತ್ರಿ ಮಲ್ಲಿಕಾ ಜೆ.ರೈ,ವಸಂತ ಕೆರೆಮನೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.



















Leave a Comment

Your email address will not be published. Required fields are marked *

error: Content is protected !!
Scroll to Top