ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ

ಪೆರುವೋಡಿ: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರೂ.5.5 ಲಕ್ಷ ವೆಚ್ಚದ ಕಾಂಕ್ರೀಟಿಕರಣ ರಸ್ತೆ ಕಾಮಗಾರಿಗೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಚಾಲನೆ ನೀಡಿದರು.

























ಕಾಮಗಾರಿಯ ಉದ್ಘಾಟನೆ ನೆರವೇರಿಸಿದ ಶಾಸಕರು, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಯಾಕರ ಆಳ್ವ ಬೋಳಕುಮೇರು, ಕುಶಾಲಪ್ಪ ಗೌಡ ಅಡ್ಯತಕಂಡ, ಉಮೇಶ್ ಕೆ.ಎಂ.ಬಿ., ದಯಾನಂದ ಗೌಡ ಜಾಲು, ರಾಮಚಂದ್ರ ಭಟ್ ಕೊಡಿಬೈಲು, ಡಾ. ನರಸಿಂಹ ಶರ್ಮ ಕಾನವು, ನರಸಿಂಹತೇಜಸ್ವಿ ಕಾನವು, ಲಿಂಗಪ್ಪ ಗೌಡ ಕುಂಡಡ್ಕ, ನಾರಾಯಣ ಕೊಂಡೆಪ್ಪಾಡಿ, ಸತ್ಯಪ್ರಸಾದ್ ಕಂಡಿಪ್ಪಾಡಿ, ದಿವಾಕರ ಬಿರುಸಾಗು, ಕಿಟ್ಟಣ್ಣ ಪುವಾಜೆ, ನಾರಾಯಣ ಪೂವಾಜೆ, ವಿಜಯ ರೈ ಪೆರುವೋಡಿ, ನವೀನ್ ರೈ ಕಾನವು, ಗೋಪಾಲ ಕಂಪ, ಸದಾಶಿವ ಆಚಾರಿ ಕಜೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜನಿತ್ ಸಂಕೇಶ, ಭರತ್ ಪೂವಾಜೆ, ದಿನೇಶ್ ಕಾನವು, ಪ್ರೀತಿ ರೈ, ಹರ್ಷವತಿ ಜಾಲು, ಶಾರದಾ ಪುವಾಜೆ, ಲತಾ ಪುವಾಜೆ ಹಾಗೂ ಸೌಮ್ಯ ಬರೆಮೇಲು ಉಪಸ್ಥಿತರಿದ್ದರು.

ಅಭಿವೃದ್ಧಿ ಕಾರ್ಯಕ್ಕೆ ಕುಶಾಲಪ್ಪ ಗೌಡರ ಶ್ರಮ

ಈ ರಸ್ತೆ ಕಾಮಗಾರಿ ಅನುಷ್ಠಾನಗೊಳ್ಳುವಲ್ಲಿ ಬೆನ್ನೆಲುಬಾಗಿ ನಿಂತು ನಿರಂತರವಾಗಿ ಶ್ರಮಿಸಿದ ಕುಶಾಲಪ್ಪ ಗೌಡ ಅಡ್ಯತಕಂಡ ಅವರ ಕಾರ್ಯವನ್ನು ಊರಿನ ಭಕ್ತಾದಿಗಳು ಶ್ಲಾಘಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ ಅವರು ಸಲ್ಲಿಸಿದ ಸೇವೆಗೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಭಕ್ತಾದಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top