ಗೋಮಾತೆಯ ಆರಾಧನೆ ಧಾರ್ಮಿಕ ಸಂಸ್ಕೃತಿಯ ಅವಿಭಾಜ್ಯ ಅಂಗ: ಮಂಜುನಾಥ ಉಡುಪ

ಸುಳ್ಯ: ಹಾಲು ನೀಡುವ ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿಯಷ್ಟೇ ಪವಿತ್ರವಾದ ಸ್ಥಾನಮಾನವಿದೆ. ಗೋವು ಕೇವಲ ಪ್ರಾಣಿ ಮಾತ್ರವಲ್ಲ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೌಟುಂಬಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಆರಾಧನೀಯ ಜೀವಿ. ಗೋವಿನ ಮಹತ್ವ ಮತ್ತು ಅದರ ಪವಿತ್ರತೆಯ ಅರಿವು ಸಮಾಜದ ಪ್ರತಿಯೊಬ್ಬರಲ್ಲೂ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗೋಪೂಜನಾ ಕಾರ್ಯಕ್ರಮಗಳು ಅಲ್ಲಲ್ಲಿ ನಿರಂತರವಾಗಿ ನಡೆಯುವ ಅಗತ್ಯವಿದೆ** ಎಂದು ಸಂಸ್ಕಾರ ಭಾರತಿ ಕಾಸರಗೋಡು ಜಿಲ್ಲಾ ಸಂಯೋಜಕ ಮಂಜುನಾಥ ಉಡುಪ ಅಭಿಪ್ರಾಯಪಟ್ಟರು.





































































ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ನಗರ ಮತ್ತು ಸುಳ್ಯ ಪ್ರಖಂಡದ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಗೋಪೂಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಭಾರತೀಯ ಸನಾತನ ಪರಂಪರೆಯಲ್ಲಿ ಗೋವಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಗೋಸೇವೆಯು ಕೇವಲ ಧಾರ್ಮಿಕ ವಿಧಿವಿಧಾನಕ್ಕೆ ಸೀಮಿತವಾಗದೆ, ಕೃತಜ್ಞತೆ, ಕರುಣೆ, ಜೀವಪ್ರೀತಿ ಮತ್ತು ಪ್ರಕೃತಿಯೊಂದಿಗಿನ ಸಹಬಾಳ್ವೆಯ ಸಂಕೇತವಾಗಿದೆ. ಗೋಮಾತೆಯ ಆರಾಧನೆಯ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಕಾರ್ಯ ನಡೆಯಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ರಾಮಚಂದ್ರ ಆಗ್ರೋ ಅವರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಳ್ಕರ್, ಸುಳ್ಯ ಕಲ್ಕುಡ ದೈವಸ್ಥಾನದ ಆಡಳಿತ ಸಮಿತಿ ಸದಸ್ಯ ಜಯರಾಮ ಬಿ.ಜಿ., ಬಜರಂಗದಳ ಸುಳ್ಯ ಪ್ರಖಂಡದ ಸಹ ಸಂಯೋಜಕ ಸನತ್ ಚೊಕ್ಕಾಡಿ, ಸುಳ್ಯ ನಗರ ಬಜರಂಗದಳದ ಸಹ ಸಂಯೋಜಕ ಪ್ರೀತೇಶ್ ನಾರ್ಣಕಜೆ, ಗೋರಕ್ಷಕ್ ಸುಳ್ಯ ನಗರ ಪ್ರಮುಖ್ ಕವನ್ ಪೂವಯ್ಯ ಹಾಗೂ ಬಜರಂಗದಳ ಸುಳ್ಯ ನಗರದ ಪೂರ್ವ ಅಧ್ಯಕ್ಷ ಉಪೇಂದ್ರ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೋಭಾ ಕಾಡುತೋಟ ಪ್ರಾರ್ಥಿಸಿದರು. ವರ್ಷಿತ್ ಚೊಕ್ಕಾಡಿ ಸ್ವಾಗತಿಸಿ, ರಾಜೇಶ್ ವಂದಿಸಿದರು.
ಯೋಗೇನ ಚಿತ್ತಸ್ತ್ಯ ಯೋಗ ಕೇಂದ್ರ ಸುಳ್ಯ ಇವರಿಂದ ಯೋಗ ನ್ರತ್ಯ ವೈಭವ ನಡೆಯಿತು.

Leave a Comment

Your email address will not be published. Required fields are marked *

error: Content is protected !!
Scroll to Top