ಸುಳ್ಯ: ಅರಂತೋಡು ಗ್ರಾಮದ ಕಿರ್ಲಾಯ ಮೂಲದವರಾಗಿದ್ದು, ಪ್ರಸ್ತುತ ಅಜ್ಜಾವರ ಗ್ರಾಮದ ಅಡ್ಡಂಗಾಯದಲ್ಲಿ ವಾಸವಾಗಿದ್ದ ರಾಮಕೃಷ್ಣ ಕಿರ್ಲಾಯ ಅವರ ಧರ್ಮಪತ್ನಿ ಶ್ರೀಮತಿ ವಿಮಲಾ (66) ಅವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 25ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತಿ ರಾಮಕೃಷ್ಣ ಕಿರ್ಲಾಯ, ಪುತ್ರ ಅಜಿತ್, ಪುತ್ರಿಯರಾದ ಲೋಲಾಕ್ಷಿ ಜಗದೀಶ್ ಗುಳಿಗನಕಲ್ಲು ಹಾಗೂ ಮಾಲತಿ ಶರತ್ ಚಂದ್ರ ಕದಿಕಡ್ಕ, ಸೊಸೆ ಮೋಕ್ಷ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ
ವಿಮಲಾ ಕಿರ್ಲಾಯ ನಿಧನ








































